ADVERTISEMENT

ಸಂಭ್ರಮದ ಕೆಂಕೇರಮ್ಮ ದೇವಿಯ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 16 ಮೇ 2019, 13:49 IST
Last Updated 16 ಮೇ 2019, 13:49 IST
ಕನಕಪುರದಲ್ಲಿ ನಡೆದ ಕೆಂಕೇರಮ್ಮ ದೇವಿಯ ರಥೋತ್ಸವದ ಮೆರವಣಿಗೆ
ಕನಕಪುರದಲ್ಲಿ ನಡೆದ ಕೆಂಕೇರಮ್ಮ ದೇವಿಯ ರಥೋತ್ಸವದ ಮೆರವಣಿಗೆ   

ಕನಕಪುರ: ನಗರದ ಶಕ್ತಿ ದೇವತೆ ಶ್ರೀಕೆಂಕೇರಮ್ಮ ದೇವಿಯ ರಥೋತ್ಸವ ಗುರುವಾರ ನಡೆಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ರಥದಲ್ಲಿ ಕೆಂಕೇರಮ್ಮ ದೇವಿಯ ಉತ್ಸವ ಮೂರ್ತಿಯನ್ನಿಟ್ಟು ದೇವಾಲಯದ ಆವರಣದಿಂದ ಮೈಸೂರು ರಸ್ತೆ, ಕೆಂಗಲ್‌ ಹನುಮಂತಯ್ಯ ವೃತ್ತದ ಮೂಲಕ ಕೋಡಿಹಳ್ಳಿ ರಸ್ತೆ ಮಾರ್ಗವಾಗಿವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಸಾಗಿತು.

ರಥೋತ್ಸವದಲ್ಲಿನ ಉತ್ಸವ ಮೂರ್ತಿಗೆ ಪ್ರತಿ ಮನೆಯವರು ಆರತಿ ಎತ್ತಿ ಪೂಜೆ ನೆರವೇರಿಸಿದರು. ನೂರಾರು ಭಕ್ತರು ರಥೋತ್ಸವದದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.