
ಪ್ರಜಾವಾಣಿ ವಾರ್ತೆ
ಚನ್ನಪಟ್ಟಣ: ಕಾರಿನ ಹಿಂದಿನ ಬಾಗಿಲು ಗಾಜು ಒಡೆದು ಬ್ಯಾಗ್‌ನಲ್ಲಿದ್ದ ₹3ಲಕ್ಷ ನಗದು ದೋಚಿರುವ ಘಟನೆ ನಗರದ ಕಾಳಿದಾಸ ಹಾಸ್ಟೆಲ್ ಮುಂಭಾಗದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ತಾಲ್ಲೂಕಿನ ಹನುಮಾಪುರದೊಡ್ಡಿ ಗುತ್ತಿಗೆದಾರ ಅರ್ಕೇಶ್ ಕುಮಾರ್, ನಗರಕ್ಕೆ ಬಂದು ಬೆಂಗಳೂರು–ಮೈಸೂರು ಹೆದ್ದಾರಿ ಬದಿಯಲ್ಲಿ ತಮ್ಮ ಕಾರು ನಿಲ್ಲಿಸಿ ಪಕ್ಕದಲ್ಲೇ ಇರುವ ಕಚೇರಿಯೊಂದಕ್ಕೆ ತೆರಳಿದ್ದರು. ಅವರು ವಾಪಸ್ ಬಂದಾಗ ಕಾರಿನ ಹಿಂಬದಿ ಬಾಗಿಲ ಗಾಜು ಒಡೆದಿರುವುದು ಕಂಡು ಬಂದಿದೆ. ನಂತರ ಪರಿಶೀಲಿಸಿದಾಗ ಕಾರಿನಲ್ಲಿ ಇಟ್ಟಿದ್ದ ನಗದು ಕಾಣೆಯಾಗಿರುವುದು ತಿಳಿದು ಬಂದಿದೆ.
ಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.