ಚನ್ನಪಟ್ಟಣ: ತಾಲ್ಲೂಕಿನ ರಾಂಪುರ ಗ್ರಾಮದ ತ್ರಿಪುರ ಸುಂದರಿ (ಮೂಗೂರಮ್ಮ) ಅಮ್ಮನ 40ನೇ ವರ್ಷದ ಕರಗ ಮಹೋತ್ಸವ ಶನಿವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಪ್ರತಿ ವರ್ಷವೂ ಮೂಗೂರಮ್ಮನ ಕರಗ ಉತ್ಸವದಲ್ಲಿ ಗ್ರಾಮದ ಮಹಿಳೆಯೊಬ್ಬರು ದೇವಿಯ ಕರಗ ಹೊತ್ತು ಮುನ್ನಡೆಯುವುದು ವಾಡಿಕೆ. ಅದರಂತೆ ಈ ಬಾರಿ ಗ್ರಾಮದ ಆರ್.ವಿ. ಅಚಲ ಕಳಸ ಹೊತ್ತು ಹೆಜ್ಜೆ ಹಾಕಿದರು.
ಒಕ್ಕಲಿನ ಮಹಿಳೆಯರು ತಲೆಯ ಮೇಲೆ ಬಾಳೆಹಣ್ಣು, ಕಾಯಿ, ಬೆಲ್ಲ, ಅಕ್ಕಿ, ಬಳೆ, ಸೀರೆ, ಅರಿಶಿನ ಕುಂಕುಮ ತುಂಬಿದ ಬುಟ್ಟಿ ಹೊತ್ತು ಕರಗ ಉತ್ಸವದ ಹಿಂದೆ ಹೆಜ್ಜೆ ಹಾಕಿದರು.
ಹುಲಿ ವೇಷ, ಗಾರುಡಿ ಗೊಂಬೆ, ಸೋಮನ ಕುಣಿತ, ಕೀಲು ಕುದುರೆ, ಕಹಳೆ ಹಾಗೂ ಮಂಗಳ ವಾದ್ಯಗಳೊಂದಿಗೆ ಕರಗ ಉತ್ಸವ ಗ್ರಾಮದ ಬೀದಿಗಳಲ್ಲಿ ಸಂಚರಿಸಿತು. ಉತ್ಸವದಲ್ಲಿ ಕವಣಾಪುರ ಗ್ರಾಮದ ಬಸವಣ್ಣ ದೇವರು ಪ್ರಮುಖ ಆಕರ್ಷಣೆಯಾಗಿತ್ತು.
ಧರ್ಮದರ್ಶಿ ಆರ್.ವಿ. ವೆಂಕಟೇಶಯ್ಯ, ರಾಂಪುರ ರಾಜಣ್ಣ, ನಿವೃತ್ತ ಅಧೀನ ಕಾರ್ಯದರ್ಶಿ ಶಿವಮಲವಯ್ಯ, ನಿವೃತ್ತ ರೆವಿನ್ಯೂ ಇನ್ ಸ್ಪೆಕ್ಟರ್ ಆರ್.ಎಸ್. ಕೃಷ್ಣಪ್ಪ, ವಿಜಯ್ ರಾಂಪುರ, ಆರ್.ವಿ. ವೇಣು, ಡಾ.ದಿನೇಶ್ ಹಾಗೂ ರವಿ ದೀಕ್ಷಿತ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.