ADVERTISEMENT

ಚನ್ನಪಟ್ಟಣ | ಕಾಡಾನೆ ದಾಳಿ: ತೆಂಗಿನಸಸಿಗಳ ನಾಶ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 6:32 IST
Last Updated 27 ಫೆಬ್ರುವರಿ 2026, 6:32 IST
ಚನ್ನಪಟ್ಟಣ ತಾಲ್ಲೂಕಿನ ಪೀಹಳ್ಳಿದೊಡ್ಡಿ ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ನೆಲಕಚ್ಚಿರುವ ತೆಂಗಿನ ಸಸಿಗಳು
ಚನ್ನಪಟ್ಟಣ ತಾಲ್ಲೂಕಿನ ಪೀಹಳ್ಳಿದೊಡ್ಡಿ ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ನೆಲಕಚ್ಚಿರುವ ತೆಂಗಿನ ಸಸಿಗಳು   

ಚನ್ನಪಟ್ಟಣ: ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಪೀಹಳ್ಳಿದೊಡ್ಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳು ದಾಳಿ ನಡೆಸಿ ರೈತರ ಜಮೀನಿನಲ್ಲಿ ಬೆಳೆದಿದ್ದ ತೆಂಗಿನ ಸಸಿಗಳನ್ನು ಧ್ವಂಸ ಮಾಡಿವೆ.


ಗ್ರಾಮದ ರೈತ ಪಿ.ಬಿ. ಭಾನುಪ್ರಸಾದ್ ಅವರ ತೆಂಗಿನತೋಟದ ಮೇಲೆ ದಾಳಿ ಮಾಡಿರುವ ಐದು ಕಾಡಾನೆಗಳ ತಂಡ ಹತ್ತಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ಉರುಳಿಸಿ ಧ್ವಂಸ ಮಾಡಿವೆ.

ನಂತರ ಪಕ್ಕದ ಜಮೀನಿನ ಸಚಿನ್ ಅವರ ತೆಂಗಿನತೋಟದ ಮೇಲೆ ದಾಳಿ ಮಾಡಿ ತೆಂಗಿನಸಸಿಗಳ ಸುಳಿಗಳನ್ನು ಕಿತ್ತು ನಾಶ ಮಾಡಿವೆ. ಘಟನೆಯಲ್ಲಿ ರೂ. 2 ಲಕ್ಷ ರೂ. ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ADVERTISEMENT


ಕಾಡಾನೆ ದಾಳಿಯಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ರೈತರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.