ADVERTISEMENT

ಕೋವಿಡ್‌ ಲಸಿಕಾ ಮೇಳ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 3:06 IST
Last Updated 4 ಸೆಪ್ಟೆಂಬರ್ 2021, 3:06 IST
ಚನ್ನಪಟ್ಟಣ ತಾಲ್ಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ಸೋಲಾರ್ ಆಧಾರಿತ ಐದು ಮೆಟ್ರಿಕ್ ಟನ್ ಕೋಲ್ಡ್ ಸ್ಟೋರೇಜ್ ಘಟಕ ಲೋಕಾರ್ಪಣೆಗೊಂಡಿತು
ಚನ್ನಪಟ್ಟಣ ತಾಲ್ಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ಸೋಲಾರ್ ಆಧಾರಿತ ಐದು ಮೆಟ್ರಿಕ್ ಟನ್ ಕೋಲ್ಡ್ ಸ್ಟೋರೇಜ್ ಘಟಕ ಲೋಕಾರ್ಪಣೆಗೊಂಡಿತು   

ಮಾಗಡಿ: ‘ಕೊರೊನಾ ಸೋಂಕಿನಿಂದ ಮುಕ್ತರಾಗಲು ಗ್ರಾಮೀಣ ಜನತೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಉಮಾದೇವಿ ತಿಳಿಸಿದರು.

ಸೋಲೂರಿನ ಸರ್ಕಾರಿ ಸಮುದಾಯ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ನಡೆದ ಲಸಿಕಾ ಮೇಳದಲ್ಲಿ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ರೋಗ ಬರುವುದಕ್ಕೆ ಮುಂಚೆಯೇ ಎಚ್ಚೆತ್ತುಕೊಳ್ಳುವುದು ಬುದ್ಧಿವಂತರ ಲಕ್ಷಣ. ಕೋವಿಡ್‌ ಎರಡನೇ ಅಲೆಯಲ್ಲಿ ಆದ ಸಾವು, ನೋವು ಮರಳಿ ಯಾರಿಗೂ ಬರಬಾರದು. ಸರ್ಕಾರವೇ ಉಚಿತ ಲಸಿಕೆ ಹಾಕುತ್ತಿರುವಾಗ ಹಳ್ಳಿಗಾಡಿನ ಮಹಿಳೆಯರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದರು.

ADVERTISEMENT

ತಜ್ಞ ವೈದ್ಯೆ ಡಾ.ಸವಿತಾ ವಿವೇಕಾನಂದ ಮಾತನಾಡಿ, ಕೊರೊನಾ ಸೋಂಕಿನ ಭಯಾನಕತೆಯನ್ನು ಅನುಭವಿಸಿದ್ದೇನೆ. ರಾಜ್ಯದಲ್ಲಿ ಸಹಸ್ರಾರು ಜೀವಗಳನ್ನು ಕಳೆದುಕೊಂಡಿದ್ದೇವೆ. ಸಮಸ್ಯೆ ಎದುರಾಗುವ ಮುನ್ನವೇ ಲಸಿಕೆ ಪಡೆದು ಜಾಗೃತರಾಗೋಣ ಎಂದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಭೈರವೇಗೌಡ ಮಾತನಾಡಿ, ಕಾಡುಗೊಲ್ಲರ ಹಟ್ಟಿ, ಪರಿಶಿಷ್ಟ, ಭೋವಿ ಕಾಲೊನಿಗಳ ನಿವಾಸಿಗಳು ಲಸಿಕೆ ಪಡೆಯಲು ಮುಂದೆ ಬರಬೇಕು ಎಂದು ಹೇಳಿದರು.

ಮಕ್ಕಳ ತಜ್ಞೆ ಡಾ.ಜಯಂತಿ, ಡಾ.ರೂಪ ಚಂದ್ರಮಾಲಾ, ಛಾಯಾ, ಶಂಕರಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.