ಕುದೂರು: ಜಮೀನು ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜೋಡುಗಟ್ಟೆ ಇರುಳಿಗರ ಕಾಲೊನಿಯಲ್ಲಿ ಭಾನುವಾರ ನಡೆದಿದೆ.
ಜಮೀನು ವಿಚಾರವಾಗಿ ಇರುಳಿಗರ ಕಾಲೊನಿ ನಡಲಯ್ಯ ಮತ್ತು ಸಂಬಂಧಿ ಮಾಸ್ತಯ್ಯ ನಡುವೆ ಹಾಗಾಗ ಜಗಳ ನಡೆಯುತ್ತಿತ್ತು. ನಡಲಯ್ಯ ಭಾನುವಾರ ಸಂಜೆ ಜಮೀನಿನ ಬಳಿ ಇರುವ ಬಂಡೆ ಮೇಲೆ ಮಲಗಿರುವ ವೇಳೆ ಮಾಸ್ತಯ್ಯನ ಜತೆ ಜಗಳ ಆಗಿದೆ.
ನಡಲಯ್ಯ ಕುತ್ತಿಗೆಗೆ ಹರಿತವಾದ ಆಯುಧದಿಂದ ಕುಯ್ದು ಮಾಸ್ತಯ್ಯ ಕೊಲೆ ಮಾಡಿರಬಹುದು ಎಂದು ಶಂಕಿಸಿ ನಡಲಯ್ಯ ಪತ್ನಿ ಬಸಮ್ಮ ಮಾಗಡಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.