ADVERTISEMENT

ಹಾರೋಹಳ್ಳಿ: ಸ್ಮಶಾನ ಸಮಸ್ಯೆ ಬಗೆಹರಿಸಲು ದಲಿತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 2:23 IST
Last Updated 17 ಅಕ್ಟೋಬರ್ 2025, 2:23 IST
ಹಾರೋಹಳ್ಳಿ ತಾಲ್ಲೂಕಿನ ಪಿಚ್ಚನಕೆರೆ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದರು 
ಹಾರೋಹಳ್ಳಿ ತಾಲ್ಲೂಕಿನ ಪಿಚ್ಚನಕೆರೆ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದರು    

ಹಾರೋಹಳ್ಳಿ: ಸ್ಮಶಾನಕ್ಕಾಗಿ ಹಲವು ವರ್ಷಗಳಿಂದ ಪರಿತಪಿಸುತ್ತಿದ್ದೇವೆ. ಈಗಾಲಾದರೂ ಪರಿಹಾರ ಒದಗಿಸಿಕೊಡಿ ಎಂದು ದೇವರಗೊಲ್ಲಹಳ್ಳಿ ದಲಿತ ಸಮುದಾಯ ಶಾಸಕರಿಗೆ ಮನವಿ ಮಾಡಿದರು.

ಹಾರೋಹಳ್ಳಿ ತಾಲ್ಲೂಕಿನ ಕೊಟ್ಟಗಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಸ್ಮಶಾನ ಭೂಮಿ, ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೂ ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಶಾಸಕ ಇಕ್ಬಾಲ್ ಹುಸೇನ್ ಕೂಡಲೇ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕೂಡಲೇ ಸ್ಪ‍ಂದಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.  

ADVERTISEMENT

ಕೊಟ್ಟಗಾಳು ಗ್ರಾಮ ಪಂಚಾಯಿತಿ ದೊಡ್ಡ ಕಲ್ಲುಬಾಳು, ಸಿದ್ದೇನಹಳ್ಳಿ, ಪಿಚ್ಚನಕೆರೆ, ಗೊಲ್ಲಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಚರಿಸಿದ ಶಾಸಕ ಒಟ್ಟು ₹2ಕೋಟಿ 80 ಲಕ್ಷದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ತಾಲ್ಲೂಕು ಇ.ಒ ಅಪೂರ್ವ, ಬಮೂಲ್ ನಿರ್ದೇಶಕ ಹರೀಶ್ ಕುಮಾರ್, ಅಶೋಕ್, ಕೊಟ್ಟಗಾಳು ಗ್ರಾ.ಪಂ ಅಧ್ಯಕ್ಷ ಬಸವರಾಜು, ಪುಟ್ಟಮಣಿ ಪುಟ್ಟಸ್ವಾಮಿ, ಗೂಗರೇದೊಡ್ಡಿ ಪರಮೇಶ್, ಕೊಳ್ಳಿಗನಹಳ್ಳಿ ವಿ.ಎಸ್.ಎಸ್.ಎನ್ ಅಧ್ಯಕ್ಷ ರವಿ, ಸಾಮಂದಿ,ನಂಜುಂಡಸ್ವಾಮಿ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.