ADVERTISEMENT

ರಾಮನಗರ | ಕ್ರೀಡಾಕೂಟ: ಜಿಬಿಜೆಸಿ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 2:35 IST
Last Updated 17 ಸೆಪ್ಟೆಂಬರ್ 2025, 2:35 IST
   

ರಾಮನಗರ: ಶಾಲಾ ಶಿಕ್ಷಣ ಇಲಾಖೆಯು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸರ್ಕಾರಿ ಬಾಲಕರ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ 9 ಮತ್ತು 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು 18 ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಅಥ್ಲೆಟಿಕ್ಸ್‌ನಲ್ಲಿ ಭುವನ್ ಬಿ.ಎಚ್ 100 ಮೀ., 200 ಮೀ. ಓಟದಲ್ಲಿ ಪ್ರಥಮ, 400 ಮೀ.ನಲ್ಲಿ ದ್ವಿತೀಯ, 4X100 ರಿಲೆ ಪ್ರಥಮ ಹಾಗೂ 4X400 ರಿಲೆಯಲ್ಲಿ ದ್ವಿತೀಯ ಸ್ವಾನ ಗಳಿಸಿದ್ದಾನೆ. ಮತ್ತೊಬ್ಬ ವಿದ್ಯಾರ್ಥಿ ಸಮೃದ್ ಡಿ. 110 ಮೀ. ಮತ್ತು 400 ಮೀ. ಹರ್ಡಲ್ಸ್‌ನಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ಪ್ರಥಮ, 4X100 ಮತ್ತು 4X400 ರಿಲೆಯಲ್ಲಿ ಪ್ರಥಮ ಸ್ವಾನ ಪಡೆದಿದ್ದಾನೆ.

ಮತ್ತೊಬ್ಬ ವಿದ್ಯಾರ್ಥಿ ಸಂದೀಪ್ 200 ಮೀ. ಮತ್ತು 1500 ಮೀ. ಓಟದಲ್ಲಿ ಪ್ರಥಮ, 4X100 ಹಾಗೂ 4X400 ರಿಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಅಮರ್‌ ಗೌಡ 400 ಮೀ. ಮತ್ತು 800 ಮೀ. ಓಟದಲ್ಲಿ ಪ್ರಥಮ ಹಾಗೂ 4X100 ಹಾಗೂ 4X400 ರಿಲೆಯಲ್ಲಿ ಮೊದಲ ಸ್ಥಾನ ಗಳಿಸಿದ್ದಾನೆ. ನಾಲ್ವರೂ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯವರು ತಿಳಿಸಿದ್ದಾರೆ.

ADVERTISEMENT

ವಿದ್ಯಾರ್ಥಿಗಳ ಸಾಧನೆಗೆ ಮುಖ್ಯ ಶಿಕ್ಷಕ ಜಿನ್ನಾ, ಶಿಕ್ಷಕರಾದ ಗೀತಾ, ಪಂಡಿತ್, ರಾಜಶೇಖರ್, ಶಿವಾಜಿ, ಸುಮಂಗಳ ಎಸ್., ಹೇಮಾ, ಶೋಭಾವತಿ, ಮೋಹನಕುಮಾರಿ, ಮಂಜುಳ ಹಾಗೂ ರವೀಂದ್ರ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.