ADVERTISEMENT

ರಾಮನಗರ: ಜಿಲ್ಲಾ‌ ಮಡಿವಾಳರ ಸಂಘಕ್ಕೆ ಆಯ್ಕೆ

ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 14:39 IST
Last Updated 23 ಜನವರಿ 2025, 14:39 IST
ರಾಮನಗರ ಜಿಲ್ಲಾ ಮಡಿವಾಳರ ಸಂಘಕ್ಕೆ ಆಯ್ಕೆಯಾದ ನೂತನ ಅಧ್ಯಕ್ಷ ಮಂಟೇದ ಇತರ ಪದಾಧಿಕಾರಿಗಳನ್ನು ಮಡಿವಾಳ ಸಮಾಜದ ಮುಖಂಡರು ಅಭಿನಂದಿಸಿದರು
ರಾಮನಗರ ಜಿಲ್ಲಾ ಮಡಿವಾಳರ ಸಂಘಕ್ಕೆ ಆಯ್ಕೆಯಾದ ನೂತನ ಅಧ್ಯಕ್ಷ ಮಂಟೇದ ಇತರ ಪದಾಧಿಕಾರಿಗಳನ್ನು ಮಡಿವಾಳ ಸಮಾಜದ ಮುಖಂಡರು ಅಭಿನಂದಿಸಿದರು   

ರಾಮನಗರ: ಜಿಲ್ಲಾ ಮಡಿವಾಳರ ಸಂಘದ ನೂತನ ಅಧ್ಯಕ್ಷರಾಗಿ ಮಂಟೇದಯ್ಯ ಅವಿರೋಧವಾಗಿ ಆಯ್ಕೆಯಾದರು.

ಜಿಲ್ಲೆಯ ನಾಲ್ಕು ತಾಲ್ಲೂಕಿನ ಅಧ್ಯಕ್ಷರು, ಪದಾಧಿಕಾರಿಗಳ ಸಭೆ ನಡೆಸಿ ಜಿಲ್ಲಾ ಮಡಿವಾಳರ ಸಂಘಕ್ಕೆ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷ ಮಂಟೇದಯ್ಯ, ಕಾರ್ಯದರ್ಶಿ ಲೋಕೇಶ್, ಉಪಾಧ್ಯಕ್ಷ ಸಿ.ಎಚ್.ಸಂತೋಷ್ ಕುಮಾರ್, ಸಿ.ಗಂಗಾಧರಯ್ಯ, ಖಜಾಂಚಿಯಾಗಿ ಶಿವನಂಜಯ್ಯ, ನಿರ್ದೇಶಕರಾಗಿ ಹರೀಶ್ ಕುಮಾರ್, ಚಂದ್ರಪ್ಪ, ಮುರುಗೇಶ್, ರುದ್ರಯ್ಯ, ವಸಂತಮ್ಮ ಅವರನ್ನು ನೇಮಕ ಮಾಡಲಾಯಿತು.

ನೂತನ ಅಧ್ಯಕ್ಷ ಮಂಟೇದಯ, ನೂತನ ಕಾರ್ಯದರ್ಶಿ ಲೋಕೇಶ್ ಮಾತನಾಡಿ, ಸಂಘವನ್ನು ಸದೃಢವಾಗಿ ಕಟ್ಟಲು ಎಲ್ಲರೂ ಒಗ್ಗಟ್ಟಿನಿಂದ ದುಡಿಯೋಣ. ಸಂಘವನ್ನು ಶಕ್ತಿಯುತವಾಗಿ ಬೆಳೆಸಲು ಎಲ್ಲರ ಸಹಕಾರ ಪ್ರೋತ್ಸಾಹ ನೀಡುವಂತೆ ಕೋರಿದರು.

ADVERTISEMENT

ತಾಲ್ಲೂಕು ಮಡಿವಾಳ ಸಂಘದ ಅಧ್ಯಕ್ಷ ವೀರಭದ್ರಯ್ಯ, ಚನ್ನಪಟ್ಟಣ ಮಡಿವಾಳರ ಸಂಘದ ಅಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ಶಿವಕುಮಾರ್, ಮಾಗಡಿ ಮಡಿವಾಳರ ಸಂಘದ ಅಧ್ಯಕ್ಷ ಟಿ.ಎಂ.ಶ್ರೀನಿವಾಸ್, ಕಾರ್ಯದರ್ಶಿ ಹರೀಶ್ ಕುಮಾರ್, ಕಾನೂನು ಸಲಹೆಗಾರ ಡಿ.ಕೆ.ಚಂದ್ರಶೇಖರ್, ಕನಕಪುರ ಮಡಿವಾಳರ ಸಂಘದ ಅಧ್ಯಕ್ಷ ಎಂ.ಭೈರಯ್ಯ, ಪುಟ್ಟಸ್ವಾಮಿ, ಕೆಂಚಪ್ಪ, ಧನಂಜಯ್ಯ, ನಿಂಗರಾಜು, ರವಿಕುಮಾರ್, ಶಿವನಂಜಯ, ಮಹದೇವ, ಗವಿಯಪ್ಪ, ರವಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.