ADVERTISEMENT

ಕೋವಿಡ್‌: ಜಾತ್ರೆ ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 4:56 IST
Last Updated 17 ಫೆಬ್ರುವರಿ 2022, 4:56 IST
ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು
ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು   

ಕನಕಪುರ: ತಾಲ್ಲೂಕಿನ ಕಲ್ಲಹಳ್ಳಿಯ ಶ್ರೀನಿವಾಸಸ್ವಾಮಿ ಬ್ರಹ್ಮ ರಥೋತ್ಸವ ಬುಧವಾರ ಸರಳವಾಗಿ ನಡೆಯಿತು.

ಈ ಗ್ರಾಮವು ಚಿಕ್ಕ ತಿರುಪತಿಯೆಂದೇ ಪ್ರಸಿದ್ಧಿಯಾಗಿದೆ. ಫೆಬ್ರುವರಿಯಲ್ಲಿ ನಡೆಯುವ ಜಾತ್ರೆ ಮತ್ತು ರಥೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಅತ್ಯಂತ ವೈಭವಯುತವಾಗಿ ಜಾತ್ರೆ ಮತ್ತು ರಥೋತ್ಸವ ನಡೆಯುತ್ತದೆ.

ಕಲ್ಲಹಳ್ಳಿ ಶ್ರೀನಿವಾಸ ದೇವಾಲಯವು ಮುಜರಾಯಿಇಲಾಖೆಗೆ ಸೇರಿದ್ದು ‘ಎ’ ಗ್ರೇಡ್‌ ದೇವಾಲಯವಾಗಿದೆ. ಸರ್ಕಾರ ಈ ಬಾರಿ ಜಾತ್ರಾ ಮಹೋತ್ಸವಕ್ಕೆ ಅವಕಾಶ ನೀಡದೆ ಕೊನೆಯ ಕ್ಷಣದಲ್ಲಿ ಸರಳವಾಗಿ ಆಚರಣೆ ಮಾಡಲು ಅನುಮತಿ ನೀಡಿತ್ತು. ಹಾಗಾಗಿ,ಜಾತ್ರೆಗೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮಧ್ಯಾಹ್ನದ ವೇಳೆಗೆ ನಡೆಯಬೇಕಿದ್ದ ರಥೋತ್ಸವವನ್ನು ಬೆಳಿಗ್ಗೆ 8ಗಂಟೆಗೆ ಸಾಂಕೇತಿಕವಾಗಿ ನಡೆಸಲಾಯಿತು.

ADVERTISEMENT

ಒಂದು ವಾರ ಕಾಲ ಜಾತ್ರೆಗೆ ಸಿದ್ಧತೆ ನಡೆಯುತ್ತದೆ. ಸುತ್ತಮುತ್ತಲಿನ ಹತ್ತು ಹಳ್ಳಿಗಳಲ್ಲಿ ಕಲ್ಲಹಳ್ಳಿ ಜಾತ್ರೆಯನ್ನು ಮಾಡುತ್ತಾರೆ.ಮೂರು ದಿನಗಳ ಕಾಲ ನಡೆಯುತ್ತಿದ್ದ ಜಾತ್ರೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸಿ 10 ಗಂಟೆಗೆ ರಥೋತ್ಸವ ಮತ್ತು ಜಾತ್ರೆ ಮುಕ್ತಾಯವಾಯಿತು. ಮದ್ದುಗುಂಡು, ಸಿಡಿ ಪ್ರದರ್ಶನ ಮತ್ತು ಮರುಜಾತ್ರೆಯನ್ನು ಈ ಬಾರಿ ಸ್ಥಗಿತಗೊಳಿ
ಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.