ADVERTISEMENT

ಗಣೇಶನ ಹೆಸರಿಟ್ಟುಕೊಂಡಿರುವವರಿಗೆ ವಂಡರ್‌ಲಾಗೆ ಉಚಿತ ಪಾಸ್‌

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 21:33 IST
Last Updated 8 ಸೆಪ್ಟೆಂಬರ್ 2021, 21:33 IST
   

ರಾಮನಗರ: ಗಣೇಶ ಚತುರ್ಥಿ ದಿನದ ಅಂಗವಾಗಿ ಬಿಡದಿಯ ವಂಡರ್ ಲಾ ಅಮ್ಯೂಸ್‌ಮೆಂಟ್‌ ಪಾರ್ಕ್‌ ವತಿಯಿಂದ ವಿಭಿನ್ನ ಕೊಡುಗೆ ನೀಡಿದೆ.

ಗಣೇಶನ 108 ಹೆಸರುಗಳ ಪೈಕಿ ಯಾವುದೇ ಹೆಸರು ನೀವು ಇಟ್ಟುಕೊಂಡಿದ್ದರೆ ಅಂತಹವರಿಗೆ ಇದೇ 10ರಂದು ವಂಡರ್‌ಲಾ ಪ್ರವೇಶಕ್ಕೆ ಉಚಿತ ಪಾಸ್ ಸಿಗಲಿದೆ.

ಮೊದಲು ಬರುವ 100 ಗ್ರಾಹಕರಿಗೆ ಈ ಪಾಸ್ ಲಭ್ಯವಿದೆ. ವಂಡರ್‌ಲಾಗೆ ನೇರವಾಗಿ ಭೇಟಿ ನೀಡಿ ಪಾಸ್ ಪಡೆಯಬಹುದು. ಅಂತಹವರು ತಮ್ಮ ಹೆಸರಿನ ಗುರುತಿನ ಚೀಟಿ ತರುವುದು ಕಡ್ಡಾಯವಾಗಿದೆ.

ADVERTISEMENT

ಹೆಚ್ಚಿನ ವಿವರಗಳಿಗೆ ದೂರವಾಣಿ 080-372 30333, 080-35073966 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.