
ಪ್ರಜಾವಾಣಿ ವಾರ್ತೆ
ಮಾಗಡಿ: ಪಟ್ಟಣದ 16 ವಾರ್ಡ್‌ನ ಜ್ಯೋತಿನಗರದಲ್ಲಿ ಶುಕ್ರವಾರ ಫ್ರೀಡ್ಜ್ ಸ್ಫೋಟದಿಂದ ಸೋಫಾ, ಬಟ್ಟೆ ಹಾಗೂ ಬೈಕ್ ಸುಟ್ಟು ಕರಕಲಾಗಿದೆ.
ನಿವಾಸಿ ಶೀಲ ಅನಿಲ್ ಕುಮಾರ್ ಎಂಬುವರ ಮನೆಯಲ್ಲಿ ಏಕಾಏಕಿ ಪ್ರೀಡ್ಜ್ ಸ್ಫೋಟವಾಗಿದೆ. ಫ್ರೀಡ್ಜ್ ಪಕ್ಕದಲ್ಲಿದ್ದ ದ್ವಿಚಕ್ರವಾಹನ, ಸೋಫಾಕ್ಕೆ ಬೆಂಕಿ ತಗುಲಿ ಸುಟ್ಟು ಹೋಗಿದೆ.
ಸ್ಫೋಟದಿಂದ ಜ್ಯೋತಿನಗರದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಬೆಂಕಿ ಹತ್ತಿಕೊಂಡಾಗ ಮನೆಯ ಸದಸ್ಯರು ಶುಕ್ರವಾರ ದೇವಾಲಯಕ್ಕೆ ತೆರಳಿದ್ದರಿಂದ ಅಪಾಯ ತಪ್ಪಿದೆ.
ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಸ್ಥಳಿಯರ ಸಹಾಯದಿಂದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದರೆ.
ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.