
ಮಾಗಡಿ: ಹಿಂದೆ ವಿವಾದಕ್ಕೊಳಗಾಗಿದ್ದ ಪಟ್ಟಣದ ಎನ್ಇಎಸ್ ವೃತ್ತದಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಸ್ವಂತ ವೆಚ್ಚದಲ್ಲಿ ತಯಾರಿಸಿರುವ ಆರು ಅಡಿ ಎತ್ತರದ ಗಾಂಧಿ ಪ್ರತಿಮೆಯನ್ನು ಸೋಮವಾರ ತರಿಸಿ ಪ್ರತಿಷ್ಠಾಪನೆಗೆ ಕೆಲಸ ಆರಂಭಿಸಲಾಗಿದೆ.
ಈ ವೃತ್ತವನ್ನು ₹2ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ರಸ್ತೆ ವಿಸ್ತರಣೆ ಮಾಡಲು ಪುತ್ಥಳಿ ತೆರವುಗೊಳಿಸಲು ಮುಂದಾದಾಗ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪ ನಡೆದಿತ್ತು.
ಈಗ ಹೊಸದಾಗಿ ನಿರ್ಮಿಸಲಾದ ಈ ಕಂಚಿನ ಪ್ರತಿಮೆಯನ್ನು ಡಿಸೆಂಬರ್ ಕೊನೆ ವಾರದಲ್ಲಿ ಅದ್ದೂರಿಯಾಗಿ ಉದ್ಘಾಟಿಸಲು ಯೋಜಿಸಲಾಗಿದೆ.
ವಿವಾದ ಸೃಷ್ಟಿಯಾಗಿದ್ದ ಪಟ್ಟಣದ ಎನ್ಇಎಸ್ ವೃತ್ತದಲ್ಲಿ ಹೊಸದಾಗಿ ಶಾಸಕ ಎಚ್.ಸಿ. ಬಾಲಕೃಷ್ಣರವರು ಸ್ವಂತ ವೆಚ್ಚದಲ್ಲಿ 6 ಅಡಿ ಎತ್ತರದ ಗಾಂಧಿ ಪ್ರತಿಮೆ ನಿರ್ಮಾಣ ಮಾಡಿಸಿದ್ದು ಸೋಮವಾರ ಮಾಗಡಿಗೆ ತಂದು ಪ್ರತಿಮೆಯನ್ನು ಕೂರಿಸುವ ಕೆಲಸ ಮಾಡಲಾಗಿದೆ.
ಪಟ್ಟಣದ ಎನ್ಇಎಸ್ ವೃತ್ತವನ್ನು ಎರಡು ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು ವೃತ್ತ ಅಭಿವೃದ್ಧಿ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎ. ಮಂಜುನಾಥ್ ರವರು ಈ ಹಿಂದೆ ಗಾಂಧಿ ಪುತ್ಥಳಿ ಸ್ಥಾಪಿಸಿದ್ದರು ಅದನ್ನು ರಸ್ತೆ ಅಗಲೀಕರಣಕ್ಕೆ ತೆರವು ಮಾಡಿ ಹೊಸದಾಗಿ ಗಾಂಧಿ ಪ್ರತಿಮೆ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಪುತ್ತಳಿ ತೆರವು ಮಾಡುವ ಸಮಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ದೊಡ್ಡ ಮಟ್ಟದಲ್ಲಿ ಪರ-ವಿರೋಧ ಹೋರಾಟ ನಡೆದಿತ್ತು ಈ ಸಮಯದಲ್ಲಿ ಜೆಡಿಎಸ್ ನವರು ಪುತ್ತಳಿ ತೆರವು ಮಾಡದಂತೆ ಪ್ರತಿಭಟನೆ ನಡೆಸಿದರು ಈ ಸಮಯದಲ್ಲಿ ಪೊಲೀಸರು ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಹೋದ ಘಟನೆ ಕೂಡ ನಡೆದಿತ್ತು ಉದ್ದೇಶ ಪೂರಕವಾಗಿಯೇ ಮಾಜಿ ಶಾಸಕರ ಹೆಸರು ಪುತ್ತಳಿ ಬಳಿ ಇದೆ ಎಂಬ ಕಾರಣಕ್ಕೆ ತೆರವು ಮಾಡಲಾಗುತ್ತಿದೆ ಎಂದು ವಿರೋಧ ವ್ಯಕ್ತವಾಗಿತ್ತು ಈಗ ವೃತ್ತ ಅಭಿವೃದ್ಧಿ ಮಾಡಲಾಗುತ್ತಿದ್ದು ಶಾಸಕ ಬಾಲಕೃಷ್ಣರವರು ಹೇಳಿದಂತೆ ನಿಂತಿರುವ ಆರು ಅಡಿ ಎತ್ತರದ ಕಂಚಿನ ಗಾಂಧಿ ಪ್ರತಿಮೆಯನ್ನು ಕಲಾವಿದರಿಂದ ಮಾಡಿಸಿ ಈಗ ಎನ್ಇಎಸ್ ವೃತ್ತದಲ್ಲಿ ಇಡಲಾಗಿದ್ದು ಡಿಸೆಂಬರ್ ಕೊನೆಯ ವಾರದಲ್ಲಿ ಅದ್ದೂರಿಯಾಗಿ ಉದ್ಘಾಟನೆಗೆ ಸಿದ್ಧವಾಗಿದ್ದು ಜೆಡಿಎಸ್ ಕಾಂಗ್ರೆಸ್ ಪಕ್ಷದ ನಡುವೆ ಪ್ರತಿಮೆ ತೆರವು ವಿಚಾರವಾಗಿ ತಾಲ್ಲೂಕಿನಲ್ಲಿ ದೊಡ್ಡ ಸುದ್ದಿಯಾಗಿತ್ತು ಈಗ ಪ್ರತಿಮೆ ನಿರ್ಮಾಣ ಮಾಡುವ ಮೂಲಕ ವಿರೋಧ ಪಕ್ಷದವರಿಗೆ ಶಾಸಕ ಬಾಲಕೃಷ್ಣರವರು ಅಭಿವೃದ್ಧಿ ಮೂಲಕವೇ ಸಂದೇಶ ಕೊಡುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಜಾಲತಾಣಗಳಲ್ಲಿ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಈಗ ಪ್ರತಿಮೆ ಸ್ಥಾಪನೆಯ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡು ಜೆಡಿಎಸ್ ಕಾರ್ಯಕರ್ತರಿಗೆ ತಿರುಗೇಟು ನೀಡುವ ಕೆಲಸವನ್ನು ಮಾಡಲಾಗುತ್ತಿದ್ದು ಪಟ್ಟಣದ ಕೆಂಪೇಗೌಡ ವೃತ್ತದಿಂದ ಎನ್ಇಎಸ್ ವೃತ್ತದವರೆಗೂ ರಸ್ತೆ ಅಗಲೀಕರಣ ಕಾಮಗಾರಿ ಹಾಗೂ ವೃತ್ತ ಅಭಿವೃದ್ಧಿ ಕಾಮಗಾರಿ ಬರದಲ್ಲಿ ಸಾಗಿದೆ.
ವಿವಾದ ಸೃಷ್ಟಿ ಮಾಡಿದ್ದ ಗಾಂಧಿ ಪ್ರತಿಮೆ ಈಗ ಲೋಕಾರ್ಪಣೆಗೆ ಸಿದ್ಧವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.