ADVERTISEMENT

ಚನ್ನಪಟ್ಟಣ: ಮೂರು ಪಕ್ಷಗಳಿಂದ ಗಣೇಶಮೂರ್ತಿ ವಿತರಣೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 15:49 IST
Last Updated 6 ಸೆಪ್ಟೆಂಬರ್ 2024, 15:49 IST
ಚನ್ನಪಟ್ಟಣದ ದೊಡ್ಡಮಳೂರು ಗ್ರಾಮದ ಸಾಯಿಮಂದಿರದಲ್ಲಿ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗಣೇಶ ಮೂರ್ತಿಗಳನ್ನು ವಿತರಣೆ ಮಾಡಿದರು. ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಎಚ್.ಸಿ. ಜಯಮುತ್ತು, ಇತರರು ಹಾಜರಿದ್ದರು
ಚನ್ನಪಟ್ಟಣದ ದೊಡ್ಡಮಳೂರು ಗ್ರಾಮದ ಸಾಯಿಮಂದಿರದಲ್ಲಿ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗಣೇಶ ಮೂರ್ತಿಗಳನ್ನು ವಿತರಣೆ ಮಾಡಿದರು. ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಎಚ್.ಸಿ. ಜಯಮುತ್ತು, ಇತರರು ಹಾಜರಿದ್ದರು   

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಪ್ರಮುಖ ಮೂರು ಪಕ್ಷಗಳ ಮುಖಂಡರು ಶುಕ್ರವಾರ ತಾಲ್ಲೂಕಿನ ಯುವಕರಿಗೆ ಉಚಿತ ಗಣೇಶ ಮೂರ್ತಿಗಳನ್ನು ವಿತರಿಸಿದರು. 

ತಾಲ್ಲೂಕಿನ ದೊಡ್ಡಮಳೂರು ಸಾಯಿಮಂದಿರದಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ. ಜಯಮುತ್ತು ಅವರು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಗಣೇಶಮೂರ್ತಿಗಳನ್ನು ವಿತರಿಸಿದರು. ತಮ್ಮ ತಾಯಿ ಹೆಸರಿನಲ್ಲಿ ಸ್ಥಾಪಿಸಿರುವ ಚನ್ನಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಗಣೇಶಮೂರ್ತಿಗಳನ್ನು ವಿತರಿಸಿಕೊಂಡು ಬರುತ್ತಿರುವ ಜಯಮುತ್ತು ಅವರು ಈ ವರ್ಷ 1000 ಮೂರ್ತಿಗಳನ್ನು ವಿತರಿಸಿದ್ದು ವಿಶೇಷವಾಗಿತ್ತು. ಮುಖಂಡರಾದ ಗೋವಿಂದಹಳ್ಳಿ ನಾಗರಾಜು, ಹಾಪ್ ಕಾಮ್ಸ್ ದೇವರಾಜು, ಕುಕ್ಕೂರುದೊಡ್ಡಿ ಜಯರಾಂ, ಇತರರು ಭಾಗವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸಹ ಈ ವರ್ಷ 1001 ಮೂರ್ತಿಗಳನ್ನು ತಾಲ್ಲೂಕಿನ ಹಳ್ಳಿಹಳ್ಳಿಗೆ ವಿತರಿಸಿದರು. 2022ರಲ್ಲಿ ಮೊದಲ ಬಾರಿಗೆ 500ಕ್ಕೂ ಹೆಚ್ಚು ಗಣೇಶಮೂರ್ತಿಗಳನ್ನು ವಿತರಿಸಿದ್ದ ಯೋಗೇಶ್ವರ್, 2023ರಲ್ಲಿ ಮೂರ್ತಿ ವಿತರಣೆ ಮಾಡಿರಲಿಲ್ಲ. ಈ ವರ್ಷ 1001 ಮೂರ್ತಿಗಳನ್ನು ವಿತರಿಸಿದರು.

ADVERTISEMENT

ನಗರ ಹಾಗೂ ತಾಲ್ಲೂಕಿನ ಐದು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಗಣೇಶಮೂರ್ತಿಗಳನ್ನು ವಿತರಣೆ ಮಾಡುವ ವ್ಯವಸ್ಥೆ ಮಾಡಿದ್ದ ಯೋಗೇಶ್ವರ್ ಅವರು, ನಗರದ ತಮ್ಮ ನಿವಾಸದ ಬಳಿ ನಗರ ವ್ಯಾಪ್ತಿಯ ಯುವಕರಿಗೆ ಗಣೇಶಮೂರ್ತಿಗಳನ್ನು ವಿತರಣೆ ಮಾಡಿದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಶಿವು, ತಾಲ್ಲೂಕು ಬಿಜೆಪಿ ಮುಖಂಡರು ಹಾಜರಿದ್ದರು.

ಇನ್ನೂ ತಾಲ್ಲೂಕು ಕಾಂಗ್ರೆಸ್ ಮುಖಂಡ ಹಾಗೂ ಬೆಂಗಳೂರು ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಅಧ್ಯಕ್ಷ ರಘುನಂದನ್ ರಾಮಣ್ಣ ತಾಲ್ಲೂಕಿನ ಕಾಡಂಕನಹಳ್ಳಿ ಗ್ರಾಮದಲ್ಲಿ ಯುವಕರಿಗೆ ಗಣೇಶಮೂರ್ತಿ ವಿತರಣೆ ಮಾಡಿದರು. ಇದೇ ಮೊದಲ ಬಾರಿಗೆ 200ಕ್ಕೂ ಹೆಚ್ಚು ಗಣೇಶಮೂರ್ತಿಗಳನ್ನು ಕೋಡಂಬಹಳ್ಳಿ ಹಾಗೂ ಅಕ್ಕೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಯುವಕರಿಗೆ ವಿತರಣೆ ಮಾಡಿದರು.

ಹಾಪ್ ಕಾಮ್ಸ್ ನಿರ್ದೇಶಕ ಶಿವಮಾದು, ಪ್ರಚಾರ ಸಮಿತಿಯ ಉಪಾಧ್ಯಕ್ಷ ಕೆ.ಎಸ್.ನಾಗರಾಜು, ಗ್ರಾ.ಪಂ. ಉಪಾಧ್ಯಕ್ಷ ಮುತ್ತುರಾಜು, ಸದಸ್ಯ ಕೆ.ಪಿ. ಪ್ರವೀಣ್, ಮುಖಂಡರಾದ ಕೆ.ಪಿ. ಮಹೇಂದ್ರ, ಪಟೇಲ್ ಶ್ರೀನಿವಾಸ್, ಕೆ.ಸಿ. ಮಂಜುನಾಥ್, ಕೆ.ಸಿ. ರಾಜು, ಹುಣಸನಹಳ್ಳಿ ಗುರು, ಶ್ಯಾನುಭೋಗನಹಳ್ಳಿ ಸತೀಶ್, ಇತರರು ಹಾಜರಿದ್ದರು.

ತಾಲ್ಲೂಕಿನಲ್ಲಿ ಇದೇ ಪ್ರಥಮ ಬಾರಿಗೆ ಮೂರು ಪ್ರಮುಖ ಪಕ್ಷಗಳ ಮುಖಂಡರು ಗಣೇಶಮೂರ್ತಿಗಳನ್ನು ವಿತರಿಸಿದ್ದು ವಿಶೇಷವಾಗಿದೆ. ಮುಂಬರುವ ಉಪ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿನ ಯುವಕರು ಹಾಗೂ ಜನರನ್ನು ಓಲೈಸುವ ಉದ್ದೇಶದಿಂದ ಸಾವಿರಾರು ಗಣೇಶ ಮೂರ್ತಿಗಳನ್ನು ವಿತರಣೆ ಮಾಡಲಾಗಿದೆ ಎನ್ನುವುದು ಸಾರ್ವಜನಿಕರ ಊಹೆಯಾಗಿದೆ. 

ಚನ್ನಪಟ್ಟಣದ ಕುವೆಂಪುನಗರ ಐದನೇ ಅಡ್ಡರಸ್ತೆಯ ತಮ್ಮ ನಿವಾಸದ ಬಳಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು ಗಣೇಶಮೂರ್ತಿಗಳನ್ನು ವಿತರಿಸಿದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಶಿವು ಇತರರು ಹಾಜರಿದ್ದರು
ಚನ್ನಪಟ್ಟಣ ತಾಲ್ಲೂಕಿನ ಕಾಡಂಕನಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಕಾಂಗ್ರೆಸ್ ಮುಖಂಡ ರಘುನಂದನ್ ರಾಮಣ್ಣ ಗಣೇಶ ಮೂರ್ತಿಗಳನ್ನು ವಿತರಿಸಿದರು. ಹಾಪ್ ಕಾಮ್ಸ್ ನಿರ್ದೇಶಕ ಶಿವಮಾದು ಇತರರು ಹಾಜರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.