
ಚನ್ನಪಟ್ಟಣ: ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಬೊಂಬೆನಾಡು ಗಂಗೋತ್ಸವಕ್ಕೆ ಭಾನುವಾರ ಅದ್ಧೂರಿಯಾದ ತೆರೆ ಬಿದ್ದಿತು. ಶಾಸಕ ಸಿ.ಪಿ. ಯೊಗೇಶ್ವರ್ ನೇತೃತ್ವದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳು ಗಮನ ಸೆಳೆದವು.
ಕಡೆಯ ದಿನವಾದ ಭಾನುವಾರ ಗಂಗರ ಕುರಿತು ಉಪನ್ಯಾಸ, ಸಾಧಕರು ಹಾಗೂ ನೌಕರರಿಗೆ ಸನ್ಮಾನ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ದೇಹದಾರ್ಢ್ಯ ಸ್ಪರ್ಧೆ ಜೊತೆಗೆ ರಾತ್ರಿಯಾಗುತ್ತಿದ್ದಂತೆ ಸಂಗಿತ ಕಾರ್ಯಕ್ರಮ ನಡೆಯಿತು. ಸಿನಿಮಾ ಕಲಾವಿದರು ಕಾರ್ಯಕ್ರಮಕ್ಕೆ ಮೆರಗು ತಂದರು.
ಇತಿಹಾಸ ತಜ್ಞ ಡಾ. ಚಿಕ್ಕರಂಗೇಗೌಡ ಅವರು ಗಂಗರ ರಾಜಮನೆತನದ ಬಗ್ಗೆ ಉಪನ್ಯಾಸ ನೀಡಿದರು. ನಂತರ ವಿವಿಧ ಕ್ಷೇತ್ರ ಗಣ್ಯರಾದ ಡಾ. ಕಾಳೇಗೌಡ ನಾಗವಾರ, ಡಾ. ಚಕ್ಕೆರೆ ಶಿವಶಂಕರ್, ಡಾ. ಸಿ.ಪಿ. ನಾಗರಾಜು, ಡಾ. ಜೆ. ಶಶಿಧರ್ ಪ್ರಸಾದ್, ನಿವೃತ್ತ ಡಿಐಜಿ ಅರ್ಕೇಶ್, ಅಬ್ಬೂರು ರಾಜಶೇಖರ್, ಸಿ. ಪುಟ್ಟಸ್ವಾಮಿ, ಬಿ.ಟಿ. ಜಯಮುದ್ದಪ್ಪ, ಡಾ. ಕೂಡ್ಲೂರು ವೆಂಕಟಪ್ಪ, ಅಣಿಗೆರೆ ಮಲ್ಲಯ್ಯ, ಡಾ. ಸಿ.ಆರ್. ಚಂದ್ರಶೇಖರ್, ಚೌ.ಪು. ಸ್ವಾಮಿ, ಡಾ. ಬಿ.ಟಿ. ನೇತ್ರಾವತಿ ಗೌಡ, ಡಾ. ವಿಜಯ ರಾಂಪುರ, ಅನಿಲ್ ಕುಮಾರ್, ವಿ. ಆಶಾ, ರಾಧಿಕಾ ರವಿಕುಮಾರ್ ಗೌಡ, ಡಾ. ದಾಮಿನಿ ದಾಸ್, ಲಕ್ಷ್ಮಿ ಕಿಶೋರ್ ಅರಸು, ಶಿವಕುಮಾರ್ ಕೋಡಂಬಳ್ಳಿ, ಕೆ.ಟಿ. ಲಕ್ಷ್ಮಮ್ಮ ಹಾಗೂ ಇತರರನ್ನು ಸನ್ಮಾನಿಸಲಾಯಿತು.
ಆನಂತರ ಕಬಡ್ಡಿ, ಕ್ರಿಕೆಟ್, ವಾಲಿಬಾಲ್, ಷಟಲ್ ಬ್ಯಾಡ್ಮಿಂಟನ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಜಯ ಗಳಿಸಿದ ತಂಡಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ನಂತರ ದೇಹಧಾರ್ಡ್ಯ ಸ್ಪರ್ಧೆ ನಡೆಯಿತು. ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಸೇರಿದಂತೆ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು, ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.