ADVERTISEMENT

ರಾಮನಗರ| ಸ್ಮಶಾನ ದಾರಿ ಒತ್ತುವರಿ ತೆರವು: ಶವದೊಂದಿಗೆ ಪ್ರತಿಭಟಿಸಿದ್ದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 2:35 IST
Last Updated 17 ಸೆಪ್ಟೆಂಬರ್ 2025, 2:35 IST
<div class="paragraphs"><p>ರಾಮನಗರ ತಾಲ್ಲೂಕಿನ ಪಾಲಾಬೋವಿದೊಡ್ಡಿ ಗ್ರಾಮದಲ್ಲಿ ಸ್ಮಶಾನ ಭೂಮಿಗೆ ತೆರಳುವ ನಕಾಶೆ ರಸ್ತೆ ಒತ್ತುವರಿ ತೆರವು ಕಾರ್ಯ ಮಂಗಳವಾರ ನಡೆಯಿತು. ತಾಲ್ಲೂಕು ಸರ್ವೆ ಅಧಿಕಾರಿ ಬಲರಾಮ್ ವಿ.ಎಂ., ಕಸಬಾ ಕಂದಾಯ ನಿರೀಕ್ಷಕ ನಾಗರಾಜು, ಗ್ರಾಮ ಲೆಕ್ಕಾಧಿಕಾರಿ ಅಜಯ್ ಹಾಗೂ ಗ್ರಾಮಸ್ಥರು ಇದ್ದಾರೆ</p></div>

ರಾಮನಗರ ತಾಲ್ಲೂಕಿನ ಪಾಲಾಬೋವಿದೊಡ್ಡಿ ಗ್ರಾಮದಲ್ಲಿ ಸ್ಮಶಾನ ಭೂಮಿಗೆ ತೆರಳುವ ನಕಾಶೆ ರಸ್ತೆ ಒತ್ತುವರಿ ತೆರವು ಕಾರ್ಯ ಮಂಗಳವಾರ ನಡೆಯಿತು. ತಾಲ್ಲೂಕು ಸರ್ವೆ ಅಧಿಕಾರಿ ಬಲರಾಮ್ ವಿ.ಎಂ., ಕಸಬಾ ಕಂದಾಯ ನಿರೀಕ್ಷಕ ನಾಗರಾಜು, ಗ್ರಾಮ ಲೆಕ್ಕಾಧಿಕಾರಿ ಅಜಯ್ ಹಾಗೂ ಗ್ರಾಮಸ್ಥರು ಇದ್ದಾರೆ

   

ರಾಮನಗರ: ತಾಲ್ಲೂಕಿನ ಪಾಲಾಬೋವಿದೊಡ್ಡಿ ಗ್ರಾಮದಲ್ಲಿ ಸ್ಮಶಾನ ಭೂಮಿಗೆ ತೆರಳುವ ನಕಾಶೆ ರಸ್ತೆ ಒತ್ತುವರಿ ತೆರವು ಕಾರ್ಯ ಮಂಗಳವಾರ ನಡೆಯಿತು. ಸೋಮವಾರ ಬೆಳಿಗ್ಗೆ ಗ್ರಾಮದ ಬೀರಯ್ಯ ವಯೋಸಹಜ ಸಾವನ್ನಪ್ಪಿದ್ದಾರೆ. ಗ್ರಾಮದಿಂದ 200 ಮೀಟರ್ ದೂರದಲ್ಲಿರುವ ಸ್ಮಶಾನಕ್ಕೆ ಶವನು ಹೊತ್ತೊಯ್ಯಲು ದಾರಿ ಇಲ್ಲದಂತಾಗಿತ್ತು. ಹಾಗಾಗಿ, ರಸ್ತೆ ಜಾಗ ತೆರವಿಗೆ ಆಗ್ರಹಿಸಿ ಗ್ರಾಮಸ್ಥರು ಶವದೊಂದಿಗೆ ಪ್ರತಿಭಟನೆ ನಡೆಸಿದ್ದರು.

ಘಟನಾ ಸ್ಥಳಕ್ಕೆ ಬಂದಿದ್ದ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದ್ದಿದ್ದರು. ಸ್ಥಳಕ್ಕೆ ಬಂದಿದ್ದ ತಹಶೀಲ್ದಾರ್ ತೇಜಸ್ವಿನಿ ಅವರು, ನಕಾಶೆ ರಸ್ತೆ ಮುಚ್ಚಿರುವುದನ್ನು ಪರಿಶೀಲಿಸಿದ್ದರು. ಒತ್ತುವರಿ ತೆರವು ಭರವಸೆ ನೀಡಿದ ಬಳಿಕ, ಗ್ರಾಮಸ್ಥರು ಶವ ಸಂಸ್ಕಾರ ನೆರವೇರಿಸಿದ್ದರು.

ADVERTISEMENT

ಅದಾದ ಮಾರನೇಯ ದಿನವೇ ತಹಶೀಲ್ದಾರ್ ಸೂಚನೆ ಮೇರೆಗೆ ತಾಲ್ಲೂಕು ಸರ್ವೆ ಅಧಿಕಾರಿ ಬಲರಾಮ್ ವಿ.ಎಂ., ಕಸಬಾ ಕಂದಾಯ ನಿರೀಕ್ಷಕ ನಾಗರಾಜು, ಗ್ರಾಮ ಲೆಕ್ಕಾಧಿಕಾರಿ ಅಜಯ್ ಹಾಗೂ ಇತರ ಅಧಿಕಾರಿಗಳನ್ನು ಒಳಗೊಂಡ ತಂಡ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿತು. ಒತ್ತುವರಿಯಾಗಿದ್ದ ಸ್ಮಶಾನದ ರಸ್ತೆ ಜಾಗವನ್ನು ಅಳತೆ ಮಾಡಿ ತೆರವುಗೊಳಿಸಿತು.

ಗ್ರಾಮಕ್ಕೆ 15 ವರ್ಷಗಳ ಹಿಂದೆ ಸ್ಮಶಾನಕ್ಕಾಗಿ 2 ಎಕರೆ ಜಾಗ ಮಂಜೂರಾಗಿದೆ. ಆದರೆ, ಸ್ಮಶಾನದ ರಸ್ತೆಯನ್ನು ಪಕ್ಕದ ಜಮೀನಿನವರು ಒತ್ತುವರಿ ಮಾಡಿದ್ದರು. ತೆರವುಗೊಳಿಸಬೇಕೆಂದು ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ಮನವಿ ಕೊಟ್ಟಿದ್ದರೂ ಪ್ರಯೋಜನವಾಗಿರಲಿಲ್ಲ. ಭರವಸೆ ನೀಡಿ ಸುಮ್ಮನಾಗುತ್ತಿದ್ದರು. ಇದೀಗ, ಶವದೊಂದಿಗೆ ಪ್ರತಿಭಟನೆ ನಡೆಸಿದ ಬಳಿಕ ಅಧಿಕಾರಿಗಳೇ ಸ್ಥಳಕ್ಕೆ ಬಂದು ನಮ್ಮ ಬೇಡಿಕೆಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸಿದ್ದಾರೆ ಎಂದು ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು.

ಅಹಿತಕರ ಘಟನೆಗೆ ಅವಕಾಶವಿಲ್ಲದಂತೆ ಮುನ್ನೆಚ್ಚರಿಕೆ ಕ್ರಮವಾಗಿ, ತೆರವು ವೇಳೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ವೇಳೆ ಗ್ರಾಮಸ್ಥರಾದ ವಕೀಲ ರವಿ ಸಿ., ರವಿ ಎಸ್., ಲಿಂಗರಾಜು, ಚಿಕ್ಕಲಿಂಗಯ್ಯ, ಆದೀಶ್, ಶೇಖರ್, ನರಸಮ್ಮ, ನಾಗ, ಕುಮಾರ್, ಚಂದ್ರೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.