
ಹಾರೋಹಳ್ಳಿ: ಪಟ್ಟಣಕ್ಕೆ ಸಮೀಪದ ಚುಳುಕನಗಿರಿ ಬೆಟ್ಟದಲ್ಲಿಅಕ್ರಮವಾಗಿ ಮಣ್ಣು ಅಗೆದು ಮಾರಾಟ ಮಾಡಲಾಗುತ್ತಿದೆ.
ಯಂತ್ರಗಳ್ನು ಬಳಸಿ ಆಳದವರೆಗೆ ಮಣ್ಣು ಅಗೆದು ನಿತ್ಯ ನೂರಾರು ಲಾರಿಗಳಲ್ಲಿ ಹೊರಗೆ ಸಾಗಿಸಲಾಗುತ್ತಿದೆ.
ಮಣ್ಣಿಗೆ ಭಾರಿ ಬೇಡಿಕೆ ಇರುವುದರಿಂದ ತಾಲ್ಲೂಕಿನಲ್ಲಿ ಇದೀಗ ಮಣ್ಣಿನ ವ್ಯವಹಾರ ಬಿರುಸುಗೊಂಡಿದೆ. ಈ ಭಾಗದಲ್ಲಿ ಎಲ್ಲೆಂದರಲ್ಲಿ ಗುಡ್ಡಗಳನ್ನು ಕೊರೆದು ಮಣ್ಣು ಸಾಗಿಸಲಾಗುತ್ತಿದೆ. ಎಲ್ಲೆಡೆ ಮಣ್ಣು ಸಾಗಿಸುವ ವಾಹನಗಳ ಭರಾಟೆ ಜೋರಾಗಿದೆ.
ಸರ್ಕಾರಿ ಜಾಗದಲ್ಲಿ ಮಣ್ಣು ತೆಗೆದು ಸಾಗಾಟ ಮಾಡಬೇಕಾದರೆ ಸ್ಥಳೀಯ ಆಡಳಿತದಿಂದ ಪರವಾನಿಗೆ ಪಡೆಯಬೇಕು. ಮಣ್ಣು ತೆಗೆಯುವ ಪ್ರಮಾಣಕ್ಕೆ ಅನುಗುಣವಾಗಿ ಸರ್ಕಾರಕ್ಕೆ ಹಣ ಸಂದಾಯ ಮಾಡಬೇಕು. ಇದ್ಯಾವುದೂ ಮಾಡದ ಮಣ್ಣುಗಳ್ಳರು ರಾತ್ರಿ ಸಮಯದಲ್ಲಿ ಮಣ್ಣು ಸಾಗಣೆ ದಂಧೆ ಮಾಡುತ್ತಿದ್ದಾರೆ.
ಬೆಟ್ಟ–ಗುಡ್ಡಗಳೇ ಮಣ್ಣು ಅಕ್ರಮ ಸಾಗಣೆದಾರರಿಗೆ ತುತ್ತಾಗುತ್ತಿವೆ. ಈಗಾಗಲೇ ಚುಳುಕನಗಿರಿ ಬೆಟ್ಟದ ತಪ್ಪಲಿನ ಸುತ್ತಮುತ್ತ ಸುಮಾರು ನೂರಾರು ಎಕರೆ ಪ್ರದೇಶದ ಮಣ್ಣಿನ ಗುಡ್ಡವನ್ನು ಕೊರೆದು ಲೂಟಿ ಮಾಡಲಾಗುತ್ತಿದೆ.
––
ಹಾರೋಹಳ್ಳಿ ತಾಲ್ಲೂಕಿನ ವಿವಿಧೆಡೆ ಚುಳುಕನಗಿರಿ ಬೆಟ್ಟ ಸೇರಿದಂತೆ ಕೈಗಾರಿಕಾ ಪ್ರದೇಶ ಸರ್ಕಾರಿ ಗೋಮಾಳ ಖಾಲಿ ಜಾಗದಲ್ಲಿ ಮಣ್ಣು ದಂಧೆ ಯಾವುದೇ ಭಯವಿಲ್ಲದೆ ನಡೆಯುತ್ತಿದೆ.
–ನಾಗರಾಜು ಸಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.