ಹಾರೋಹಳ್ಳಿ: ಇಲ್ಲಿನ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ ಸ್ನೇಹ ಬಳಗದ ವತಿಯಿಂದ ಭಾನುವಾರ ಗುರುವಂದನಾ ಕಾರ್ಯಕ್ರಮ ನಡೆಯಿತು.
ಈ ವೇಳೆ ನಿವೃತ್ತ ಶಿಕ್ಷಕ ಎಲ್.ನರಸಿಂಹಯ್ಯ ತೊಂಡೋಟಿ ಮಾತನಾಡಿ, ಭಾರತಕ್ಕೆ ಸ್ವತಂತ್ರ ಬಂದು 75 ವರ್ಷಗಳಾದರೂ ಜಾತಿ, ಧರ್ಮ ಎಂದು ಕಾಲ ಕಳೆಯುತ್ತಿದ್ದೇವೆ. ಅದನ್ನು ತೊಡೆದು ಹಾಕಿ ಎಲ್ಲರೂ ಸಮಾನವಾಗಿ ಜೀವಿಸಬೇಕು ಎಂದರು.
ನಿವೃತ್ತ ಶಿಕ್ಷಕ ಶ್ರೀನಿವಾಸನ್ ಮಾತನಾಡಿ, ನಾವು ಗುರುಗಳಾಗಿ ಎಷ್ಟು ನ್ಯಾಯ ಒದಗಿಸಿದ್ದೀವೋ ಗೊತ್ತಿಲ್ಲ, ಆದರೆ ನಮ್ಮನ್ನು ಮರೆಯದೆ ಸನ್ಮಾನಿಸುತ್ತಿರುವುದು ಅವಿಸ್ಮರಣೀಯ. ಎಲ್ಲರೂ ಉತ್ತಮ ವ್ಯಕ್ತಿಗಳಾಗಿದ್ದಾರೆ ತುಂಬಾ ಖುಷಿ ತಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 23 ಮಂದಿ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಟಿ.ಎಚ್.ಹೊಸಮನಿ, ಸುಶಿಲೇಂದ್ರ, ಎಸ್.ಶಂಕರ್, ಕೆ.ವಿ ವೆಂಕಟೇಶ್, ಮಾಧವ್ ರಾವ್, ಹರೀಶ್ ಕುಮಾರ್, ವೇಣು, ಮಲ್ಲೇಶ್, ಲೋಕೇಶ್, ಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.