ADVERTISEMENT

ಹಾರೋಹಳ್ಳಿ: ಹೊನ್ನಾಲಗನದೊಡ್ಡಿ ಡೇರಿ ಸಭೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 5:05 IST
Last Updated 25 ಸೆಪ್ಟೆಂಬರ್ 2025, 5:05 IST
ಹಾರೋಹಳ್ಳಿ ತಾಲ್ಲೂಕಿನ ಹೊನ್ನಾಲಗನದೊಡ್ಡಿ ಹಾಲು ಉತ್ಪಾದಕ ಸಹಕಾರ ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಗಣ್ಯರು ಮಾತನಾಡಿದರು 
ಹಾರೋಹಳ್ಳಿ ತಾಲ್ಲೂಕಿನ ಹೊನ್ನಾಲಗನದೊಡ್ಡಿ ಹಾಲು ಉತ್ಪಾದಕ ಸಹಕಾರ ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಗಣ್ಯರು ಮಾತನಾಡಿದರು    

ಹಾರೋಹಳ್ಳಿ: ತಾಲ್ಲೂಕಿನ ಹೊನ್ನಾಲಗನದೊಡ್ಡಿ ಹಾಲು ಉತ್ಪಾದಕ ಸಹಕಾರ ಸಂಘದ ಆವರಣದಲ್ಲಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.

‘ನಮ್ಮ ರಾಜ್ಯದ ಹಾಲಿಗೆ ಹೆಚ್ಚು ಬೇಡಿಕೆಯಿದೆ. ಇಲ್ಲಿನ ಹಸುಗಳು ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿದ್ದು, ಈ ಹಸುಗಳನ್ನು ಬೇರೆ ರಾಜ್ಯಗಳಿಗೆ ಸಾಗಾಣೆ ಮಾಡಲಾಗುತ್ತಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಹಸುಗಳನ್ನು ಮಾರಾಟ ಮಾಡಬೇಡಿ’ ಎಂದು ಬಮೂಲ್ ನಿರ್ದೇಶಕ ಎಚ್.ಎಸ್.ಹರೀಶ್ ಕುಮಾರ್ ತಿಳಿಸಿದರು.

ಗುಣಮಟ್ಟದ ಹಾಲು ಪೂರೈಸುವ ಮೂಲಕ ಎಲ್ಲರೂ ಸಂಘದ ಏಳಿಗೆಗೆ ಸಹಕರಿಸಿ. ಹಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಜೊತೆಗೆ ಹೈನುಗಾರಿಕೆಯತ್ತ ಹೆಚ್ಚು ಗಮನಹರಿಸಿ ಎಂದರು.

ADVERTISEMENT

ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜು ಮಾತನಾಡಿ, ಸಂಘವು 7ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.

ವಿವಿಧ ಗ್ರಾಮಗಳಲ್ಲಿ ಮೃತಪಟ್ಟ ರಾಸುಗಳಿಗೆ ಸುಮಾರು ₹10 ಲಕ್ಷ ಪರಿಹಾರ ಧನ ವಿತರಿಸಲಾಯಿತು.

ಉಪ ವ್ಯವಸ್ಥಾಪಕ ರಾಕೇಶ್ ಅಗಡಿ, ವಿಸ್ತರಣಾಧಿಕಾರಿ ಕುಮಾರ್, ಬಸವರಾಜು.ಎಂ, ಶೋಕ್ ರಾಜೇ ಅರಸ್, ಪುಟ್ಟಸ್ವಾಮಿ, ಮೋಟಯ್ಯ, ಎಚ್.ಕೆ.ರಾಮಯ್ಯ, ಎಚ್.ಎಸ್.ರಾಜು, ಮಹಾಲಿಂಗಯ್ಯ, ಕೆಂಪಮ್ಮ, ಸುಜಾತ, ನೇತ್ರ, ಹನುಮಮ್ಮ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.