
ಮಾಗಡಿ: ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದದ್ದು ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಹಾಯಕವಾಯಿತು ಎಂದು ರಾಜ್ಯ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಅಭಿಪ್ರಾಯಪಟ್ಟರು.
ಜಿಕೆಬಿಎಂಎಸ್ ಸರ್ಕಾರಿ ಶಾಲೆ ವಾರ್ಷಿಕೋತ್ಸವದಲ್ಲಿ ಹಳೆ ವಿದ್ಯಾರ್ಥಿಯಾಗಿ ಮಾತನಾಡಿದ ಅವರು, ತಮ್ಮ ಬಾಲ್ಯದಲ್ಲಿ ಶಿಕ್ಷಕರು ನೀಡಿದ ಸ್ಫೂರ್ತಿ ಮತ್ತು ತರಗತಿಯ ಮುಖ್ಯಸ್ಥರನ್ನಾಗಿಸಿದ್ದನ್ನು ಸ್ಮರಿಸಿದರು. ತಮ್ಮ ಪ್ರಾಥಮಿಕ ಶಾಲೆಯನ್ನು ಹಳೆ ವಿದ್ಯಾರ್ಥಿಗಳ ಸಹಾಯದಿಂದ ಅಭಿವೃದ್ಧಿಪಡಿಸಿದ ಹಿನ್ನೆಲೆಯನ್ನು ಹಂಚಿಕೊಂಡರು. ಈ ಶಾಲೆಯ ಅಭಿವೃದ್ಧಿಗಾಗಿ ಹಳೆ ವಿದ್ಯಾರ್ಥಿಗಳ ಟ್ರಸ್ಟ್ ರಚನೆಗೆ ₹1ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು. ಹಾಗೆಯೇ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಶಾಲೆ ಪ್ರಗತಿ ಚರ್ಚಿಸಲು ಹಳೆ ವಿದ್ಯಾರ್ಥಿಗಳನ್ನು ಸೇರಿಸೋಣ ಎಂದರು.
ಹಳೆ ವಿದ್ಯಾರ್ಥಿ ಮತ್ತು ಮಾಜಿ ಪುರಸಭಾ ಅಧ್ಯಕ್ಷ ಪಿ.ವಿ.ಸೀತಾರಾಮ್, ರೇವಣ್ಣ ಅವರ ನೇತೃತ್ವ ಮತ್ತು ಮಾರ್ಗದರ್ಶನವನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ಜಿಕೆಬಿಎಂಎಸ್ ಶಾಲೆ ಹಳೆ ವಿದ್ಯಾರ್ಥಿಗಳಾದ ನಿವೃತ್ತ ಪೊಲೀಸ್ ಅಧೀಕ್ಷಕ ನರಸಿಂಹಯ್ಯ, ಆರ್ಯವೈಶ್ಯ ಸಮುದಾಯದ ಕೃಷ್ಣಮೂರ್ತಿ, ಪ್ರಭಾಕರ್ ಗುಪ್ತ, ವಾಸವಿ ನಾಗರಾಜು, ನಟರಾಜು, ರಾಜ್ ಕುಮಾರ್ ಬಿ.ಎನ್., ಶಿಕ್ಷಣಾಧಿಕಾರಿ ಎಸ್.ಸಿ.ಚಂದ್ರಶೇಖರ್, ಬಿ.ಎನ್.ಜಯರಾಮ್, ತಾಲ್ಲೂಕು ಶಿಕ್ಷಕರ ಅಧ್ಯಕ್ಷ ಇಸಿಒ ನಾರಾಯಣ್, ಸಿಆರ್‌ಪಿ ಲಕ್ಷ್ಮಿನಾರಾಯಣ್, ಮುಖ್ಯ ಶಿಕ್ಷಕಿ ಪದ್ಮ, ಶಿಕ್ಷಕರಾದ ರವಿಕುಮಾರ್, ಮುದಿಗೆರೆ ಗೌಡ, ಮಮತಾ, ನಳಿನ ಕುಮಾರಿ, ಗಂಗಮ್ಮ ಸೇರಿದಂತೆ ನೂರಾರು ಮಂದಿ ಹಳೆ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳು ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು.
ಮಾಗಡಿ: ನಾನು ಸರ್ಕಾರಿ ಶಾಲೆಯಲ್ಲಿ ಓದುವ ಸಮಯದಲ್ಲೇ ನಾಯಕತ್ವ ಗುಣ ಬೆಳೆಸಿಕೊಂಡು ರಾಜಕೀಯದಲ್ಲಿ ಮುಂದೆ ಬರಲು ಸಹಕಾರಿಯಾಗಿದೆ ಎಂದು ರಾಜ್ಯ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.
ಪಟ್ಟಣದ ಜಿಕೆಬಿಎಂಎಸ್ ಸರ್ಕಾರಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ನನ್ನ ಬಾಲ್ಯದಲ್ಲಿ ಕ್ರೀಡೆಯ ಜೊತೆ ಜೊತೆಗೆ ನಾಯಕತ್ವ ಗುಣ ಬೆಳೆಸಿಕೊಳ್ಳಲು ಇಲ್ಲಿನ ಶಿಕ್ಷಕರು ಸ್ಪೂರ್ತಿ ಕೊಡುತ್ತಿದ್ದರು ನನ್ನ ಗುರುಗಳು ನನ್ನನ್ನು ತರಗತಿಯ ಮುಖ್ಯಸ್ಥನನ್ನಾಗಿ ಮಾಡಿದ್ದು ಇಂದಿಗೂ ಸಹ ಅದನ್ನೇ ಮುಂದುವರಿಸಿಕೊಂಡು ಜೀವನ ನಡೆಸುತ್ತಿರುವೆ ಹಾಗೆಯೇ ಸುಮಾರು ಐದು ದಶಕಗಳ ನನ್ನ ವಿದ್ಯಾರ್ಥಿ ದೆಸೆಯಲ್ಲಿನ ನನ್ನ ಸಹಪಾಠಿಗಳನ್ನು ಇಂದು ಒಂದೇ ವೇದಿಕೆಯಲ್ಲಿ ಅವರೊಟ್ಟಿಗೆ ಬಾಲ್ಯದ ನೆನಪುಗಳನ್ನು ಮೆಲಕು ಹಾಕಿದ್ದು ಮನಸ್ಸಿಗೆ ತುಂಬಾ ಸಂತೋಷವಾಗಿದೆ ನಮ್ಮ ಹೊಸಪೇಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನನ್ನ ಪ್ರಾಥಮಿಕ ಶಿಕ್ಷಣ ನಡೆಯಿತು ಅಲ್ಲಿಯೂ ಸಹ ಹಳೆಯ ವಿದ್ಯಾರ್ಥಿಗಳ ಸಂಘದಲ್ಲಿ ನಾನು ಎಲ್ಲರಂತೆ ಸದಸ್ಯನಾಗಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಲು ನಾನು ಮತ್ತು ನನ್ನ ಸಹಪಾಠಿಗಳು ಶ್ರಮವಹಿಸಿ ಇಂದು ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಿ ಮಕ್ಕಳಿಗೆ ಅತ್ಯುನ್ನತ ಪರಿಕರಗಳ ಜೊತೆಗೆ ಉತ್ತಮ ಶಿಕ್ಷಣವು ಸಿಗುವಂತಾಗಿದೆ ಅದರಂತೆ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ಜಿಕೆಬಿಎಂಎಸ್ ಶಾಲೆಯನ್ನು ಸಹ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಟ್ರಸ್ಟನ್ನು ರಚಿಸಿ ಟ್ರಸ್ಟ್ ಗೆ ಎಲ್ಲ ನನ್ನ ಸಹಪಾಠಿಗಳು ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳು ತಮ್ಮ ಕೈಲಾದಷ್ಟು ತನು ಮನ ಧನ ಸಹಾಯ ಮಾಡಿದ್ದೆ ಆದಲ್ಲಿ ಈ ಶಾಲೆಯನ್ನು ಸಹ ಸರ್ವಾಂಗೀಣ ಅಭಿವೃದ್ಧಿ ಮಾಡಿ ಇಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಅತ್ಯುನ್ನತ ಶಿಕ್ಷಣ ದೊರೆಯುವಂತೆ ನಾವೆಲ್ಲರೂ ಕೈಜೋಡಿಸಬೇಕೆಂದು ಟ್ರಸ್ಟಿಗೆ ಮೊದಲ ದಾನಿಯಾಗಿ ನಾನು ಒಂದು ಲಕ್ಷ ರೂ ದೇಣಿಗೆಯನ್ನು ನೀಡುತ್ತೇನೆ ನನ್ನ ಸಹಪಾಠಿಗಳು ಸಹ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳು ಸಹಕಾರ ಸಲಹೆ ಸೂಚನೆಗಳೊಂದಿಗೆ ಈ ಶಾಲೆಯನ್ನು ಅಭಿವೃದ್ಧಿಗೊಳಿಸಲು ಸಹಕಾರ ನೀಡಬೇಕು, ಜತೆಗೆ ಕೇವಲ ವಾರ್ಷಿಕೋತ್ಸವಕ್ಕೆ ಮಾತ್ರ ಹಳೆಯ ವಿದ್ಯಾರ್ಥಿಗಳು ಸೀಮಿತವಾಗದಂತೆ ಶಾಲೆಯ ಅಭಿವೃದ್ಧಿಗೆ ಕನಿಷ್ಠ ಮೂರು ತಿಂಗಳ ಒಮ್ಮೆಯಾದರೂ ಶಾಲೆಯಲ್ಲಿ ಸಭೆ ಸೇರಿ ಶಾಲೆಯ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸೋಣ ಎಂದು ತಿಳಿಸಿದರು.
ಹಳೆ ವಿದ್ಯಾರ್ಥಿ ಹಾಗೂ ಮಾಜಿ ಪುರಸಭಾ ಅಧ್ಯಕ್ಷ ಪಿ.ವಿ. ಸೀತಾರಾಮ್ ಮಾತನಾಡಿ, ನಾನು ಕೂಡ ಈ ಶಾಲೆಯ ಹಳೇ ವಿದ್ಯಾರ್ಥಿಯಾಗಿದ್ದು ನಾನು ವ್ಯಾಸಂಗ ಮಾಡಿದ ಶಾಲೆಯಲ್ಲಿಯೇ ನನ್ನ ಹಿರಿಯ ವಿದ್ಯಾರ್ಥಿಗಳಲ್ಲಿ ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮ ಚಾಪನ್ನು ಮೂಡಿಸಿದ್ದು ಜತೆಗೆ ನನ್ನ ಶಾಲೆಯ ವಿದ್ಯಾರ್ಥಿಗಳಾಗಿರುವುದು ಹಾಗೂ ಮಾಜಿ ಸಚಿವರು ಕ ಆಗಿರುವ ಎಚ್.ಎಂ. ರೇವಣ್ಣನವರು ನನ್ನ ಶಾಲೆಯ ಹೆಸರಿನ ಜತೆಗೆ ಕ್ಷೇತ್ರದ ಹೆಸರನ್ನು ರಾಜ್ಯದಲ್ಲಿ ತಂದಿದ್ದಾರೆ ನಾವು ಅವರ ಸಹಪಾಠಿಗಳಾಗಿ ರಾಜಕೀಯ ಕ್ಷೇತ್ರದಲ್ಲಿ ಜನಗಳ ಸೇವೆ ಮಾಡಲು ಅವರ ಮಾರ್ಗದರ್ಶನ ಕಾರಣವಾಗಿದೆ ನಾವು ಕಲಿತ ಶಾಲೆಯಿಂದ ನಮ್ಮ ಜೀವನ ಸಾರ್ಥಕವಾಗಿದೆ ಆದರೆ ಹಿರಿಯರ ಮಾರ್ಗದರ್ಶನದಲ್ಲಿ ನಾವು ಕಲಿತ ಶಾಲೆಗೆ ಕೊಡುಗೆ ನೀಡುವುದರ ಜತೆಗೆ ಅಭಿವೃದ್ಧಿಯ ಪತದತ್ತ ಕೊಂಡೊಯ್ಯಲು ನಾವು ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಕೆಬಿಎಂಎಸ್ ಶಾಲೆಯ ಹಳೆ ವಿದ್ಯಾರ್ಥಿಗಳಾದ ನಿವೃತ್ತ ಪೊಲೀಸ್ ಅಧೀಕ್ಷಕರು ನರಸಿಂಹಯ್ಯ, ಆರ್ಯವೈಶ್ಯ ಸಮುದಾಯದ ಕೃಷ್ಣಮೂರ್ತಿ, ಪ್ರಭಾಕರ್ ಗುಪ್ತ, ವಾಸವಿ ನಾಗರಾಜು, ನಟರಾಜು, ರಾಜ್ ಕುಮಾರ್ ಬಿ.ಎನ್. ಶಿಕ್ಷಣಾಧಿಕಾರಿ ಎಸ್.ಸಿ. ಚಂದ್ರಶೇಖರ್, ಬಿ.ಎನ್. ಜಯರಾಮ್, ತಾಲ್ಲೂಕು ಶಿಕ್ಷಕರ ಅಧ್ಯಕ್ಷ ಇಸಿಒ ನಾರಾಯಣ್, ಸಿಆರ್ ಪಿ ಲಕ್ಷ್ಮೀನಾರಾಯಣ್ , ಮುಖ್ಯ ಶಿಕ್ಷಕಿ ಪದ್ಮ ಶಿಕ್ಷಕರಾದ ರವಿಕುಮಾರ್, ಮುದಿಗೆರೆ ಗೌಡ , ಮಮತಾ, ನಳಿನ ಕುಮಾರಿ, ಗಂಗಮ್ಮ, ಸೇರಿದಂತೆ ನೂರಾರು ಮಂದಿ ಹಳೆಯ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳು ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.