ರಾಮನಗರ: ಕಾಂಗ್ರೆಸ್ ನವರು ಯಡಿಯೂರಪ್ಪ ಅವರ ಬಗ್ಗೆ ಮೃದು ಧೋರಣೆ ತೋರುವ ನಾಟಕದ ಮೂಲಕ ಒಂದು ಸಮುದಾಯವನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೂರಿದರು.
ರಾಮನಗರದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮಂಗಳವಾರ ಪೂಜೆ ಸಲ್ಲಿಸಿದ ಬಳಿಕ ಪತ್ರಕರ್ತರ ಜೊತೆ ಅವರು ಮಾತನಾಡಿದರು. ಕಾಂಗ್ರೆಸ್‌ನಲ್ಲಿ ಸಿ.ಎಂ. ಕುರ್ಚಿಗೆ ಟವಲ್ ಹಾಕಿರುವ ಒಬ್ಬರು, 'ಈಗಿನ ಸಿ.ಎಂ. ಭ್ರಷ್ಟರು. ಮುಂದೆ ಬರುವವರು ಭ್ರಷ್ಟರೇ' ಎನ್ನುತ್ತಾರೆ. ಆದರೆ ಇನ್ನೊಬ್ಬರು ಯಡಿಯೂರಪ್ಪ ಪರವಾಗಿ ಮಾತನಾಡುತ್ತಾರೆ. ಇದೆಲ್ಲ ಓಲೈಕೆಗೆ ಅಷ್ಟೇ ಎಂದರು.
ಬಿಜೆಪಿಯಿಂದ ಹೊಸ ಮುಖ್ಯಮಂತ್ರಿ ಆಯ್ಕೆ ಅವರ ಪಕ್ಷದ ಆಂತರಿಕ ವಿಚಾರ. ಇದರ ಲಾಭ ಪಡೆಯಲು ಚಿಂತನೆ ಮಾಡುವುದಿಲ್ಲ ಎಂದು ಹೇಳಿದರು.
ನಾನು ಎರಡು ಬಾರಿ ಅದೃಷ್ಟದಿಂದ ಮುಖ್ಯಮಂತ್ರಿ ಆದೆ. ಮುಂದೆಯೂ ತಾಯಿ ಚಾಮುಂಡೇಶ್ವರಿ ಅಧಿಕಾರ ಕೊಡುವ ವಿಶ್ವಾಸ ಇದೆ. ಜೆಡಿಎಸ್ ಕಥೆ ಮುಗಿದೇ ಹೋಯಿತು ಎನ್ನುವವರಿಗೆ ಉತ್ತರ ಸಿಗಲಿದೆ ಎಂದರು.
ಇನ್ನಷ್ಟು ಓದು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.