
ರಾಮನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷರಾಗಿ ‘ವಿಜಯವಾಣಿ’ ದಿನಪತ್ರಿಕೆಯ ಶಿವಲಿಂಗಯ್ಯ ವಿಭೂತಿಕೆರೆ, ಪ್ರಧಾನ ಕಾರ್ಯದರ್ಶಿಯಾಗಿ ‘ವಿಜಯ ಕರ್ನಾಟಕ’ ದಿನಪತ್ರಿಕೆಯ ಮಂಜುನಾಥ ಎಸ್. ಹಾಗೂ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಚನ್ನಪಟ್ಟಣದ ‘ಉದಯವಾಣಿ’ ವರದಿಗಾರ ಶಿವಮಾದಯ್ಯ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ಶಿವಲಿಂಗಯ್ಯ 55 ಮತ ಪಡೆಯುವ ಮೂಲಕ ಎದುರಾಳಿ ಪಿ.ಎಸ್. ರಾಜು (ಪಾದ್ರಳ್ಳಿ) ಅವರನ್ನು 15 ಮತಗಳ ಅಂತರದಿಂದ ಮಣಿಸಿದರು.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ‘ಕನ್ನಡ ಪ್ರಭ’ ದಿನಪತ್ರಿಕೆಯ ಜಿಲ್ಲಾ ವರದಿಗಾರ ಅಫ್ರೋಜ್ ಖಾನ್ ವಿರುದ್ಧ ಕಣಕ್ಕೆ ಇಳಿದಿದ್ದ ಮಂಜುನಾಥ್ 57 ಮತ ಪಡೆದು 13 ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದರು.
ಉಪಾಧ್ಯಕ್ಷರಾಗಿ ಬಿಡದಿಯ ವಿ.ಕ ವರದಿಗಾರ ಶಿವರಾಜು ಟಿ., ಚನ್ನಪಟ್ಟಣದ ಲಕ್ಷ್ಮೀಪತಿ, ಕನಕಪುರದ ಶಿವಲಿಂಗಯ್ಯ ಶಿವನಹಳ್ಳಿ, ಕಾರ್ಯದರ್ಶಿಗಳಾಗಿ ಮಾಗಡಿಯ ಎಂ.ಎಸ್. ಸಿದ್ದಲಿಂಗೇಶ್ವರ, ಚನ್ನಪಟ್ಟಣದ ಕೇಶವಮೂರ್ತಿ, ರಾಮನಗರ ಎಂ. ಜಗದೀಶ್ ಗೆಲುವು ಸಾಧಿಸಿದರು.
ಕಾರ್ಯಕಾರಿಣಿ ಸಮಿತಿ ಸದಸ್ಯರು: ‘ಪ್ರಜಾವಾಣಿ’ಯ ಚನ್ನಪಟ್ಟಣದ ಅರೆಕಾಲಿಕ ವರದಿಗಾರ ಎಚ್.ಎಂ. ರಮೇಶ್, ಬೋರಯ್ಯ ಜೆ.ಸಿ, ವೆಂಕಟೇಶ್ ಗೌಡ (ಎ.ಟಿ. ವೆಂಕಟೇಶ್ ಪ್ರಭು), ಎಸ್.ವಿ. ಗಿರೀಶ್, ರವಿಕಿರಣ್ ವಿ., ಜಗದೀಶ್ ಎಸ್., ಎಸ್. ರುದ್ರೇಶ್ವರ, ರಮೇಶ್ ಆರ್., ಅನಿಲ್ ಎಸ್., ಡಿ.ಟಿ. ತಿಲಕ್ ರಾಜ್, ಬಿ. ಮಹದೇವಯ್ಯ (ಬೆಂಕಿ), ಸೋಮಶೇಖರ್, ನರಸಿಂಗರಾವ್ ಕೆ., ಶ್ರೀಧರ್ ಎಸ್., ಗಜಫರ್ ಆಲಿ ಬೇಗ್ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.