
ಪ್ರಜಾವಾಣಿ ವಾರ್ತೆ
FIR
– ಕಡತ ಚಿತ್ರ
ಕನಕಪುರ: ಬೈಕ್‌ನಲ್ಲಿ ಹೊರಟಿದ್ದ ಪೌರಕಾರ್ಮಿಕನನ್ನು ಅಡ್ಡಗಟ್ಟಿ ಮದ್ಯ ಖರೀದಿಸಲು ಹಣ ನೀಡುವಂತೆ ಕೊಲೆ ಬೆದರಿಕೆ ಹಾಕಿದ ಇಬ್ಬರು ಅಪರಿಚಿತ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು ರಸ್ತೆಯ ರಿಲಯನ್ಸ್ ಪೆಟ್ರೋಲ್ ಬಂಕ್ ಬಳಿ ಡಿ.22 ರಂದು ಪೌರಕಾರ್ಮಿಕ ನಾಗೇಶ್ ಎಂಬುವರನ್ನು ಅಡ್ಡಗಟ್ಟಿದ ಆರೋಪಿಗಳಿಬ್ಬರು ಕುಡಿಯಲು ಹಣ ಕೊಡುವಂತೆ ಕೇಳಿದರು. ಹಣ ಕೊಡಲು ನಿರಾಕರಿಸಿದಾಗ ಬೈಕ್‌ನಿಂದ ಕೆಳಗಿಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದರು.
ಅವರಿಂದ ತಪ್ಪಿಸಿಕೊಂಡು ಹೊರಟ ನಾಗೇಶ್ ಅವರನ್ನು ಹಿಂಬಾಲಿಸಿಕೊಂಡು ಬಂದು ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದಾರೆ. ಪುರ ಪೊಲೀಸ್ ಠಾಣೆಗೆ ನಾಗೇಶ್ ದೂರು ನೀಡಿದ್ದಾರೆ. ಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.