ADVERTISEMENT

ಚನ್ನಪಟ್ಟಣ: ಕಿದ್ವಾಯಿ ಆಸ್ಪತ್ರೆಗೆ 80 ಯೂನಿಟ್ ರಕ್ತ ಕೊಡುಗೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 4:19 IST
Last Updated 18 ನವೆಂಬರ್ 2025, 4:19 IST
ಚನ್ನಪಟ್ಟಣದಲ್ಲಿ ಸಂಗ್ರಹಿಸಲಾಗಿದ್ದ 80 ಯೂನಿಟ್ ರಕ್ತವನ್ನು ಬ್ಲಡ್ ಬ್ಯಾಂಕಿನ ವ್ಯವಸ್ಥಾಪಕ ಚಂದ್ರೇಗೌಡ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಈಚೆಗೆ ಕೊಡುಗೆಯಾಗಿ ನೀಡಿದರು. ಲಯನ್ಸ್ ಕ್ಲಬ್ ಆದರ್ಶದ ಅಧ್ಯಕ್ಷೆ ಭುವನೇಶ್ವರಿ, ಸದಸ್ಯೆ ಮಮತಾ ಸುಂದರ್ ರಾಜು, ಇತರರು ಹಾಜರಿದ್ದರು

ಚನ್ನಪಟ್ಟಣ: ಜೀವಾಮೃತ ಬ್ಲಡ್ ಬ್ಯಾಂಕ್, ಬ್ಲಡ್ ಫ್ರೀ ಫೌಂಡೇಶನ್, ಲಯನ್ಸ್ ಕ್ಲಬ್ ಆದರ್ಶ ಹಾಗೂ ಲಿಯೋ ಕ್ಲಬ್ ಬಿಐಟಿ ಸಹಯೋಗದಲ್ಲಿ ಸಂಗ್ರಹಿಸಲಾದ 80 ಯೂನಿಟ್ ರಕ್ತವನ್ನು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಈಚೆಗೆ ಕೊಡುಗೆಯಾಗಿ ನೀಡಲಾಯಿತು.

ಜೀವಾಮೃತ ಬ್ಲಡ್ ಬ್ಯಾಂಕಿನ ನೇತೃತ್ವದಲ್ಲಿ ವಿವಿಧೆಡೆ ರಕ್ತದಾನ ಶಿಬಿರ ಏರ್ಪಡಿಸಿ ಸಂಗ್ರಹಿಸಲಾಗಿದ್ದ ರಕ್ತವನ್ನು ಆಸ್ಪತ್ರೆಗೆ ನೀಡಲಾಗುತ್ತಿದೆ. ರಕ್ತದಾನವು ಮಾನವೀಯತೆಯ ಅತ್ಯುನ್ನತ ಸೇವೆ. ಒಬ್ಬರ ರಕ್ತ ಮತ್ತೊಬ್ಬರಿಗೆ ಜೀವ ನೀಡಬಹುದು. ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ರಕ್ತದಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಬ್ಲಡ್ ಬ್ಯಾಂಕಿನ ವ್ಯವಸ್ಥಾಪಕ ಚಂದ್ರೇಗೌಡ ಮನವಿ ಮಾಡಿದರು.

ಆಸ್ಪತ್ರೆ ಆಡಳಿತ ಮಂಡಳಿ ಸದಸ್ಯರು ರಕ್ತವನ್ನು ಸ್ವೀಕರಿಸಿದರು. ಲಯನ್ಸ್ ಕ್ಲಬ್ ಆದರ್ಶದ ಅಧ್ಯಕ್ಷೆ ಭುವನೇಶ್ವರಿ, ಸದಸ್ಯೆ ಮಮತಾ ಸುಂದರ್ ರಾಜು, ಲಿಯೋ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.