ADVERTISEMENT

ಲಕ್ಷ್ಮಿನಾರಾಯಣ ಸ್ವಾಮಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 4:47 IST
Last Updated 17 ಫೆಬ್ರುವರಿ 2022, 4:47 IST
ಚನ್ನಪಟ್ಟಣ ಗರುಡಗಂಬದ ಬೀದಿಯ ಶ್ರೀಲಕ್ಷ್ಮಿನಾರಾಯಣ ಸ್ವಾಮಿ ಬ್ರಹ್ಮ ರಥೋತ್ಸವ ನಡೆಯಿತು
ಚನ್ನಪಟ್ಟಣ ಗರುಡಗಂಬದ ಬೀದಿಯ ಶ್ರೀಲಕ್ಷ್ಮಿನಾರಾಯಣ ಸ್ವಾಮಿ ಬ್ರಹ್ಮ ರಥೋತ್ಸವ ನಡೆಯಿತು   

ಚನ್ನಪಟ್ಟಣ: ಇತಿಹಾಸ ಪ್ರಸಿದ್ಧ ನಗರದ ಗರುಡಗಂಬದ ಬೀದಿಯ ಶ್ರೀಲಕ್ಷ್ಮಿನಾರಾಯಣ ಸ್ವಾಮಿಯ ಬ್ರಹ್ಮ ರಥೋತ್ಸವ ಬುಧವಾರ ಅದ್ದೂರಿಯಾಗಿ ನಡೆಯಿತು.

ಮಾಘ ಹುಣ್ಣಿಮೆಯ ದಿನವಾದ ಇಂದು ದೇವಾಲಯ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ನಡೆದ ಬ್ರಹ್ಮ ರಥೋತ್ಸವವು ದೇವಾಲಯ ಆವರಣದಿಂದ ಆರಂಭಗೊಂಡು ನಗರದ ಎಂ.ಜಿ. ರಸ್ತೆಯಲ್ಲಿ ಸಾಗಿತು.

ಲಕ್ಷ್ಮಿನಾರಾಯಣ ಸ್ವಾಮಿಯನ್ನು ರಥದಲ್ಲಿ ಕೂರಿಸಿ ಪೂಜಾ ಕುಣಿತ, ಪಟದ ಕುಣಿತ, ಕೋಲಾಟ, ವೀರಗಾಸೆ, ಕರಡಿ ಕುಣಿತ, ತಮಟೆ, ನಗಾರಿ ಹಾಗೂ ಮಂಗಳವಾದ್ಯಗಳ ಸಮೇತ ಮೆರವಣಿಗೆ ಮಾಡಲಾಯಿತು.

ADVERTISEMENT

ನಗರದ ಅಂಚೆ ಕಚೇರಿ ರಸ್ತೆ, ಜೆ.ಸಿ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ರಥ ಸಾಗಿತು. ನೂರಾರು ಭಕ್ತರು ರಥಕ್ಕೆ ಪೂಜೆ ಸಲ್ಲಿಸಿದರು.

ಸಮಾಜ ಸೇವಕ ಸಾದತ್ ಉಲ್ಲಾ ಸಕಾಫ್, ಡಿವೈಎಸ್‌ಪಿ ಕೆ.ಎನ್. ರಮೇಶ್, ದೇವಾಲಯ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಎಂ.ಜಿ.ಕೆ. ಪ್ರಕಾಶ್, ಎಂ.ಸಿ. ಕರಿಯಪ್ಪ, ಗುಂಡಪ್ಪ, ಚಂದೂಗೌಡ, ರಾಮಚಂದ್ರ, ಸ್ವಾಮಿ, ಶರತ್, ರಘು, ನಾಗೇಂದ್ರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.