ರಾಮನಗರ: ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ಬೆಂಗಳೂರಿನ ಕ್ರೈಸ್ಟ್ (ಡೀಮ್ಡ್ ವಿಶ್ವವಿದ್ಯಾಲಯ) ಕಾನೂನು ಶಾಲೆಯಡಿ, ಉನ್ನತ ಮಟ್ಟದ ಸಮಿತಿಗಳಲ್ಲಿ ಒಂದಾದ ಕಾನೂನು ಸೇವಾ ಕೇಂದ್ರವು ಕಾನೂನು ಅರಿವು ಮತ್ತು ಸಹಾಯ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಮನಗರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಎಂ. ಶ್ರೀವತ್ಸ, ‘ದೇಶದ ಪ್ರತಿಯೊಬ್ಬ ಪ್ರಜೆಗೂ ಈ ನೆಲದ ಕಾನೂನಿನ ಅರಿವು ಮುಖ್ಯ. ತನಗಾದ ಅನ್ಯಾಯಕ್ಕೆ ಸೂಕ್ತ ನ್ಯಾಯ ಪಡೆದುಕೊಳ್ಳುವ ಮಾರ್ಗ ಎಲ್ಲರಿಗೂ ಗೊತ್ತಾಗಬೇಕು. ಸಂವಿಧಾನ ಮನೆಗೆ ಕೊಟ್ಟಿರುವ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಸಹ ಕಾನೂನಿನ ಚೌಕಟ್ಟಿನಲ್ಲಿ ಅನುಭವಿಸಬೇಕು’ ಎಂದರು.
ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆಗಳನ್ನು ನಡೆಸಿದರು. ಭೂ ವಿವಾದಗಳು, ದಾಖಲೆಗಳು ಕಾಣೆಯಾಗುವುದು ಮತ್ತು ಪಡಿತರ ಅಥವಾ ಪಿಂಚಣಿ ತೊಂದರೆಗಳಂತಹ ವಿಷಯಗಳ ಕುರಿತು ಸ್ಥಳದಲ್ಲೇ ಪರಿಹಾರಕ್ಕೆ ಸಲಹೆ ನೀಡಿದರು. ಗ್ರಾಮದಲ್ಲಿ ತೆರೆದಿದ್ದ ಕಾನೂನು ಸಹಾಯ ಕೇಂದ್ರದಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮವನ್ನು ಡಾ. ಜಯಂತಿಬಾಯಿ ಎಚ್.ಎಲ್ ಮತ್ತು ಅಶೋಕ್ ರೊಡ್ರಿಗಸ್ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಕಾನೂನು ಶಾಲೆಯ ದೀಪ, ವಕೀಲರ ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ಮಾಜಿ ಅಧ್ಯಕ್ಷ ಹನುಮಂತರಾಜು, ಸಮಿತಿ ಸದಸ್ಯರಾದ ನಿಮಿಷ್, ಗಗನ್, ಕಮಲೇಶ್ವರ್, ಪುನರ್ವ, ರಿಷಿತಾ, ಹಿತೇಶ್, ಯಶಸ್, ನಿಷ್ಕಾ, ಜೀವಿತ್, ಮನೀಷ್, ಮಾವೆನ್, ಯಶಸ್ ರಾಜ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.