
ಪ್ರಜಾವಾಣಿ ವಾರ್ತೆ
ಕನಕಪುರ: ಐ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರಿಗೆದೊಡ್ಡಿ ಗ್ರಾಮದಲ್ಲಿ ಅರಣ್ಯ ಅಧಿಕಾರಿಗಳು ಇಟ್ಟಿದ್ದ ಬೋನಿನಲ್ಲಿ ಚಿರತೆಯೊಂದು ಸೋಮವಾರ ಸೆರೆಯಾಗಿದೆ.
ತೆರಿಗೆ ದೊಡ್ಡಿ ಗ್ರಾಮದ ಮಹದೇವ ನಾಯಕ ಎಂಬುವರ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಚಿರತೆ ಸೆರೆ ಹಿಡಿಯಲು ಮನವಿ ಮಾಡಲಾಗಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಟ್ಟು ಅದರಲ್ಲಿ ಕೋಳಿ ಬಿಟ್ಟಿದ್ದರು. ಕೋಳಿ ತಿನ್ನುವ ಆಸೆಯಿಂದ ಬಂದ ಚಿರತೆಯು ಬೋನಿನಲ್ಲಿ ಸೋಮವಾರ ಬೆಳಗ್ಗೆ ಸೆರೆಯಾಗಿದೆ.
ಬೋನಿನಲ್ಲಿ ಬಂಧಿಯಾಗಿರುವ ಚಿರತೆಯು ಸುಮಾರು ಎರಡು ವರ್ಷದ ಮರಿ ಚಿರತೆಯಾಗಿದೆ. ಅದನ್ನು ಸುರಕ್ಷಿತವಾಗಿ ವನ್ಯಜೀವಿ ಅರಣ್ಯ ಪ್ರದೇಶಕ್ಕೆ ಬಿಟ್ಟಿರುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.