ADVERTISEMENT

ಎಚ್‌ಡಿಕೆ ಮನವಿಗೆ ಸಿಗದ ಬೆಂಬಲ: ಚನ್ನಪಟ್ಟಣ ಲಾಕ್‌ಡೌನ್‌ಗೆ ಇಲ್ಲ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 6:04 IST
Last Updated 28 ಜೂನ್ 2020, 6:04 IST
ಚನ್ನಪಟ್ಟಣದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ನಡೆಯುತ್ತಿದ್ದ ವ್ಯಾಪಾರ ವಹಿವಾಟು
ಚನ್ನಪಟ್ಟಣದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ನಡೆಯುತ್ತಿದ್ದ ವ್ಯಾಪಾರ ವಹಿವಾಟು   

ಚನ್ನಪಟ್ಟಣ: ಸ್ವಯಂಪ್ರೇರಿತ ಲಾಕ್‌ಡೌನ್‌ಗೆ ಶನಿವಾರವೂ ಯಾವುದೇ ಬೆಂಬಲ ಸಿಗದೆ ಪಟ್ಟಣದಲ್ಲಿ ವಹಿವಾಟು ಎಂದಿನಂತೆ ನಡೆಯಿತು.

ಶಾಸಕ ಎಚ್.ಡಿ.ಕುಮಾರಸ್ವಾಮಿ ಮನವಿಗೆ ಸ್ಪಂದಿಸಿದ ಪಟ್ಟಣದ ವರ್ತಕರ ಸಂಘದ ಪದಾಧಿಕಾರಿಗಳು, ಜೂನ್‌25ರಿಂದ ಜುಲೈ10ವರೆಗೂ ಮಧ್ಯಾಹ್ನ 12ರವರೆಗೂ ಲಾಕ್ ಡೌನ್ ಮಾಡಲು ನಿರ್ಧರಿಸಿದ್ದರು.ಆದರೆ, ಶೇ60ರಷ್ಟು ವ್ಯಾಪಾರಿಗಳು ಎಂದಿನಂತೆ ವ್ಯಾಪಾರ ನಡೆಸಿದರು. ವರ್ತಕರ ಸಂಘದ ಪದಾಧಿಕಾರಿಗಳು ಶುಕ್ರವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆಟೊ ಮೂಲಕ ಮಧ್ಯಾಹ್ನ ದ ನಂತರ ಅಂಗಡಿಗಳನ್ನು ಮುಚ್ಚುವ ಮೂಲಕ ಲಾಕ್ ಡೌನ್ ಮಾಡಿ ಕೊರೊನಾ ತೊಲಗಿಸಲು ಕೈಜೋಡಿಸಬೇಕು ಎಂದು ಕರಪತ್ರ ನೀಡಿ ಮನವಿ ಮಾಡಿದ್ದರು. ‌‌

ಜನಜಂಗುಳಿ ಪ್ರದೇಶಗಳಾದ ಜೆ.ಸಿ ರಸ್ತೆ, ಎಂ.ಜಿ ರಸ್ತೆ, ಪೇಟೆ ಬೀದಿಯಲ್ಲಿ ಶೇ70ರಷ್ಟು ಅಂಗಡಿಗಳು ಬಾಗಿಲು ಮುಚ್ಚಿದ್ದವು. ಬೆಂಗಳೂರು ಮೈಸೂರು ಹೆದ್ದಾರಿ ಎರಡು ಬದಿಗಳಲ್ಲಿ ಶೇ 30ಕ್ಕೂ ಕಡಿಮೆ ಅಂಗಡಿಗಳು ಬಾಗಿಲು ಮುಚ್ಚಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.