ADVERTISEMENT

ಚನ್ನಪಟ್ಟಣ: ಲೋಕಾಯುಕ್ತ ಬಲೆಗೆ ಲೈನ್‌ಮ್ಯಾನ್‌

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 3:17 IST
Last Updated 4 ಸೆಪ್ಟೆಂಬರ್ 2025, 3:17 IST
<div class="paragraphs"><p>ಕರ್ನಾಟಕ ಲೋಕಾಯುಕ್ತ</p></div>

ಕರ್ನಾಟಕ ಲೋಕಾಯುಕ್ತ

   

– ಪ್ರಜಾವಾಣಿ ಚಿತ್ರ

ಚನ್ನಪಟ್ಟಣ (ರಾಮನಗರ): ಮೀಟರ್ ಬದಲಾಯಿಸಲು ₹10 ಸಾವಿರ ಲಂಚ ಪಡೆಯುತ್ತಿದ್ದ ಬೆಸ್ಕಾಂ ಲೈನ್‌ಮ್ಯಾನ್‌ ಒಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತಾಲ್ಲೂಕಿನ ಬೇವೂರು ಉಪ ವಿಭಾಗದಲ್ಲಿ ಲೈನ್‌ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ಲಂಚ ಪಡೆಯುವಾಗ ಬಂಧನಕ್ಕೆ ಒಳಗಾದವರು.

ADVERTISEMENT

ಚಿಕ್ಕನದೊಡ್ಡಿಯ ಹನುಮಂತಯ್ಯ ಅವರ ಮನೆಯ ಹಳೆಯ ಮೀಟರ್ ಬದಲಾಯಿಸಬೇಕಿತ್ತು. ಈ ಕುರಿತು, ರಮೇಶ್ ಅವರನ್ನು ಸಂಪರ್ಕಿಸಿದಾಗ ಅರ್ಜಿ ಕೊಟ್ಟು ಹಾಕಿಸಿಕೊಳ್ಳಲು ಹೆಚ್ಚು ಖರ್ಚಾಗುತ್ತದೆ. ಹಾಗಾಗಿ, ₹10 ಸಾವಿರ ಕೊಟ್ಟರೆ ತಾನೇ ಅಳವಡಿಸಿ ಕೊಡುವುದಾಗಿ ಹೇಳಿದ್ದ. ಅಲ್ಲದೆ, ₹10 ಸಾವಿರ ತಲುಪಿಸುವಂತೆ ಬೇಡಿಕೆ ಇಟ್ಟಿದ್ದ.

ಈ ಕುರಿತು ಹನುಮಂತಯ್ಯ ಅವರು ನೀಡಿದ ದೂರಿನ ಮೇರೆಗೆ, ಲೋಕಾಯುಕ್ತ ಎಸ್‌ಪಿ ಪಿ.ವಿ. ಸ್ನೇಹ ಮಾರ್ಗದರ್ಶನ ಹಾಗೂ ಡಿವೈಎಸ್ಪಿ ಶಿವಪ್ರಸಾದ್ ಮೇಲ್ವಿಚಾರಣೆಯಲ್ಲಿ ಇನ್‌ಸ್ಪೆಕ್ಟರ್ ಸಂದೀಪ್ ಕುಮಾರ್ ಬಿ.ಎನ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಹನುಮಂತಯ್ಯ ಅವರಿಂದ ರಮೇಶ್ ಅವರು ಹಣ ಪಡೆಯುತ್ತಿದ್ದಾಗ ಬಂಧಿಸಿತು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.