
ಮಾಗಡಿ: ಎಸ್ಟೇಟ್ ತೋಟದಲ್ಲಿ ಸಾಕಿರುವ ನಾಯಿಗಳು ದನಗಾಹಿಯೊಬ್ಬರ ಮೇಲೆ ದಾಳಿ ನಡೆಸಿರುವ ಘಟನೆ ಭಾನುವಾರ ನಡೆದಿದೆ.
ತಾಲ್ಲೂಕಿನ ಆಲೂರು ಗ್ರಾಮದ ವರದರಾಜು (75) ದನಗಾಹಿ ಹೊಲದಲ್ಲಿ ದನ ಮೇಯಿಸಿಕೊಂಡು ತಲೆ ಮೇಲೆ ಹುಲ್ಲು ಹೊರೆ ಹೊತ್ತುಕೊಂಡು ರಸ್ತೆಯಲ್ಲಿ ನಡೆದು ಬರುತ್ತಿರುವಾಗ ಆಲೂರು ಎಸ್ಟೇಟ್‌ನಲ್ಲಿ ಸಾಕಿದ ನಾಯಿಗಳು ಅವರ ಮೇಲೆ ದಾಳಿ ಮಾಡಿವೆ. ಕೈಯಿ, ಸೊಂಟದ ಭಾಗಕ್ಕೆ ಬಲವಾಗಿ ಕಚ್ಚಿವೆ. ಗಾಯಾಳುನ್ನು ಸೋಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ನೆಲಮಂಗಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಜಯಂತ್ ಎಂಬುವರು ಎಸ್ಟೇಟ್‌ನಲ್ಲಿ ವಿದೇಶಿ ನಾಯಿಗಳನ್ನು ಸಾಕಿದ್ದಾರೆ. ಅಪರಾಧದ ಹಿನ್ನೆಲೆಯಲ್ಲಿ ಅವರು ಜೈಲಿಗೆ ಹೋದ ಹಿನ್ನೆಲೆಯಲ್ಲಿ ನಾಯಿಗಳಿಗೆ ಊಟವಿಲ್ಲದೆ ಬೀದಿಗೆ ಅಟ್ಟಲಾಗಿದೆ. ಹಸಿದ ನಾಯಿಗಳು ಜನರ ಮೇಲೆ ಮತ್ತು ಮಕ್ಕಳ ಮೇಲೆ ದಾಳಿ ನಡೆಸುತ್ತಿವೆ. ಈ ಬಗ್ಗೆ ಬಾಣವಾಡಿ ಪಿಡಿಒಗೆ ಗಮನಕ್ಕೆ ತರುವ ಕೆಲಸ ಮಾಡಲಾಗುವುದು ಎಂದು ವರದರಾಜು ಸಂಬಂಧಿ ಹೇಮಂತ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.