ADVERTISEMENT

ಮಾಗಡಿ | ಎಲ್ಲ ಮಕ್ಕಳಿಗೂ ಶಿಕ್ಷಣ, ಸಂಸ್ಕಾರ ನೀಡಿ: ಎಂ.ಬಿ. ಶಿವಾನಂದ್

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 4:15 IST
Last Updated 21 ಜನವರಿ 2026, 4:15 IST
ಮಾಗಡಿ ಬಸವೇಶ್ವರ ದೇವಸ್ಥಾನದಲ್ಲಿ ಮಾಗಡಿ ಟೌನ್ ವೀರಶೈವ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಶಿವಾನಂದ ಅವರನ್ನು ಇಮ್ಮಡಿ ಬಸವರಾಜ ಸ್ವಾಮೀಜಿ ಸನ್ಮಾನಿಸಿದರು.
ಮಾಗಡಿ ಬಸವೇಶ್ವರ ದೇವಸ್ಥಾನದಲ್ಲಿ ಮಾಗಡಿ ಟೌನ್ ವೀರಶೈವ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಶಿವಾನಂದ ಅವರನ್ನು ಇಮ್ಮಡಿ ಬಸವರಾಜ ಸ್ವಾಮೀಜಿ ಸನ್ಮಾನಿಸಿದರು.   

ಮಾಗಡಿ: ಪಟ್ಟಣದ ಅರಳೆಪೇಟೆಯ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಮಾಗಡಿ ಟೌನ್ ವೀರಶೈವ ಮಂಡಳಿ ನೂತನ ಅಧ್ಯಕ್ಷರಾಗಿ ಎಂ.ಬಿ. ಶಿವಾನಂದ್ ಅವರನ್ನು ಆಯ್ಕೆ ಮಾಡಲಾಯಿತು.

ಜಗದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ ನೂತನ ಅಧ್ಯಕ್ಷ ಶಿವಾನಂದ್ ಅವರನ್ನು ಸನ್ಮಾನಿಸಿ, ಬಸವಣ್ಣನವರ ತತ್ವ ಆದರ್ಶಗಳನ್ನು ಪಾಲನೆ ಮಾಡುವಂತೆ ಸಲಹೆ ಮಾಡಿದರು.

ಸಮಾಜದ ಪ್ರತಿಯೊಬ್ಬರನ್ನೂ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡಬೇಕು. ಸಮಾಜದ ಎಲ್ಲ ಮಕ್ಕಳಿಗೂ ಶಿಕ್ಷಣ, ಸಂಸ್ಕಾರ ನೀಡಿ, ಉನ್ನತ ಉದ್ಯೋಗ ಕೊಡಿಸಬೇಕು ಎಂದು ಸಲಹೆ ಮಾಡಿದರು.

ADVERTISEMENT

ಉಮಾ ಮಹೇಶ್, ಪ್ರಕಾಶ್, ನಟರಾಜ್, ಜಗದೀಶ್, ರೇಣುಕಾರಾಧ್ಯ, ರವಿ, ಮಹಾಂತೇಶ್, ಮಧು, ಪೊಲೀಸ್ ವಿಜಯ್ ಕುಮಾರ್ ಮತ್ತು ಅಕ್ಕನ ಬಳಗದ ಸದಸ್ಯರು ಹಾಗೂ ವಿನಾಯಕ ಬಳಗದ ಸದಸ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.