ADVERTISEMENT

ಕನಕಪುರ: ಮಹದೇಶ್ವರ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 2:24 IST
Last Updated 29 ಮಾರ್ಚ್ 2021, 2:24 IST
ಮಳಗಾಳು ಗ್ರಾಮದಲ್ಲಿ ನಡೆದ ಬ್ರಹ್ಮರಥೋತ್ಸವ
ಮಳಗಾಳು ಗ್ರಾಮದಲ್ಲಿ ನಡೆದ ಬ್ರಹ್ಮರಥೋತ್ಸವ   

ಕನಕಪುರ: ಇಲ್ಲಿನ ಮಳಗಾಳು ಗ್ರಾಮದಲ್ಲಿರುವ ಪ್ರಸನ್ನ ಪಾರ್ವತಿ ಸಮೇತ ಮಹದೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಕಾರ್ಯಕ್ರಮವು ಭಾನುವಾರ ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಸುಮಾರು 150 ವರ್ಷಗಳ ಇತಿಹಾಸವಿರುವ ಮಹದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಹೋಳಿ ಹುಣ್ಣಿಮೆಯಂದು ನಡೆಯುತ್ತದೆ. ದೇವಾಲಯದಲ್ಲಿ ಭಾನುವಾರ ಸ್ವಾಮಿಗೆ ವಿಶೇಷ ಅಲಂಕಾರದೊಂದಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.

ದೇವಾಲಯದ ಅರ್ಚಕರಾದ ಮಂಜುನಾಥ್‌ ದೀಕ್ಷಿತ್‌, ಶಿವರಾಂ ದೀಕ್ಷೀತ್‌ ಪೂಜಾ ಕಾರ್ಯಗಳನ್ನು ಬ್ರಹ್ಮ
ರಥೋತ್ಸವವನ್ನು ನೆರವೇರಿಸಿಕೊಟ್ಟರು.

ADVERTISEMENT

ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಗ್ರಾಮದ ಹಿರಿಯ ಮುಖಂಡರಾದ ಮಂಜುನಾಥ್‌, ಎಂ.ನಾಗರಾಜು, ಎಂ.ಸಂಪತ್‌, ಎಂ.ಶ್ರೀನಿವಾಸ್‌, ಮುನಿಮರಸಯ್ಯ, ವೆಂಕಟರಮಣಸ್ವಾಮಿ, ಎಸ್.ಬಿ.ದಾಸಪ್ಪ, ರಾಜು, ಜಯರಾಮು, ಕೋಟೆ ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.