ಪ್ರಾತಿನಿಧಿಕ ಚಿತ್ರ
ಮಾಗಡಿ: ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಬಿಸಿಯೂಟ ಆಹಾರ ಸರಬರಾಜು ಮಾಡುವ ವಾಹನ ಟೆಂಡರ್ ಅವಧಿ ಮುಕ್ತಾಯವಾಗಿದೆ.
ಆಹಾರ ಸರಬರಾಜು ಮಾಡುತ್ತಿದ್ದ ವಾಹನ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದೆ. ಹೊಸ ಟೆಂಡರ್ ಪ್ರಕ್ರಿಯೆ ಮುಗಿಯುವವರೆಗೂ ಆಹಾರ ಸರಬರಾಜು ಮಾಡುವಂತೆ ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರೇಣುಕೇಶ್, ಸರಬರಾಜು ಮಾಡುವವರಿಗೆ ಮನವಿ ಮಾಡಿದರು ಕೂಡ ಹೊಸ ಆದೇಶ ಕೊಡುವವರೆಗೂ ಸರಬರಾಜು ಮಾಡಲು ಆಗುವುದಿಲ್ಲ ಎಂದು ಟೆಂಡರ್‌ದಾರರು ತಿಳಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಗಮನಕ್ಕೂ ತರಲಾಗಿದೆ. ಹೊಸ ಟೆಂಡರ್‌ದಾರರು ನಿಗದಿಯಾದ ನಂತರ ಸಮಸ್ಯೆ ಆಗುವುದಿಲ್ಲ ಎಂದು ರೇಣುಕೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.