ಬಿಡದಿ (ರಾಮನಗರ): ‘ನೇರವಾಗಿ ಮತ್ತು ನಿಷ್ಠುರವಾಗಿ ಮಾತನಾಡುವವರು ಯಾವ ಪಕ್ಷದಲ್ಲೂ ಉಳಿಯಲ್ಲ. ಬಸನಗೌಡ ಪಾಟೀಲ ಯತ್ನಾಳ ಇಲ್ಲದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಉಚ್ಛಾಟನೆ ಮೂಲಕ ಅವರಿಗೆ ಒಂದು ಎಚ್ಚರಿಕೆ ಕೊಟ್ಟಿದ್ದಾರಷ್ಟೆ’ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ಯತ್ನಾಳ ಉಚ್ಛಾಟನೆ ಕುರಿತು ಪಟ್ಟಣದಲ್ಲಿ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಯತ್ನಾಳ ಅವರಿಗೆ ಉಚ್ಛಾಟನೆ ಹೊಸದಲ್ಲ. ಎರಡನೇ ಸಲ ಅವರು ಉಚ್ಛಾಟನೆಯಾಗಿದ್ದಾರೆ. ಬಿಜೆಪಿಗೆ ಶಕ್ತಿ ಇದ್ದರೆ, ಅವರನ್ನು ಶಾಶ್ವತವಾಗಿ ಪಕ್ಷದಿಂದ ವಜಾ ಮಾಡಲಿ ನೋಡೋಣ?’ ಎಂದು ಸವಾಲು ಹಾಕಿದರು.
‘ಕುಟುಂಬ ರಾಜಕಾರಣ ಬರುವುದಕ್ಕೆ ಮುಂಚೆಯೇ ನಾನು ಬಿಜೆಪಿ ಬಿಟ್ಟಿದ್ದೆ. ಅಲ್ಲಿಂದ ಮತ್ತೊಂದು ಕುಟುಂಬ ರಾಜಕಾರಣ ಸೇರಿದ ನಾನು, ಕಡೆಗೆ ಅವರ ಸಹವಾಸವನ್ನು ಸಹ ಬಿಟ್ಟೆ’ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.