ADVERTISEMENT

ರಾಮನಗರ: ಪೊಲೀಸ್ ಶ್ವಾನ ‘ರಾಮ್‌’ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 5:33 IST
Last Updated 5 ಜನವರಿ 2023, 5:33 IST
ಪೊಲೀಸ್ ಶ್ವಾನ ‘ರಾಮ್‌’
ಪೊಲೀಸ್ ಶ್ವಾನ ‘ರಾಮ್‌’   

ರಾಮನಗರ: 250ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಪತ್ತೆ ಕಾರ್ಯ ನಿರ್ವಹಿಸಿದ್ದ ಜಿಲ್ಲೆಯ ಹೆಮ್ಮೆಯ ಪೊಲೀಸ್ ಶ್ವಾನ ‘ರಾಮ್‌’ ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿತು.

ರಾಮನಗರ ಜಿಲ್ಲಾ ಪೊಲೀಸ್ ಘಟಕಕ್ಕೆ 2017ನೇ ಸಾಲಿನಲ್ಲಿ ಸೇರ್ಪಡೆಗೊಂಡ ಈ ನಾಯಿಗೆ ಬೆಂಗಳೂರಿನ ಆಡುಗೋಡಿಯಲ್ಲಿನ ಪೊಲೀಸ್ ಶ್ವಾನ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗಿತ್ತು. ನಂತರದಲ್ಲಿ ರಾಮನಗರ ಶ್ವಾನ ದಳದಲ್ಲಿ 6 ವರ್ಷ ಸೇವೆ ಸಲ್ಲಿಸಿದ ರಾಮ್ ಶ್ವಾನವು, 250ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಪತ್ತೆ ಕಾರ್ಯ ನಿರ್ವಹಿಸಿ, 30 ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿ ಪ್ರಶಂಸೆ ಗಳಿಸಿತ್ತು.

ಬುಧವಾರ ಸರ್ಕಾರಿ ಗೌರವಗಳೊಂದಿಗೆ ಚನ್ನಪಟ್ಟಣದ ಡಿಎಆರ್ ಕವಾಯತು ಮೈದಾನದಲ್ಲಿ ರಾಮ್‌ ಅಂತ್ಯಕ್ರಿಯೆ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್‌ಬಾಬು, ಡಿಎಆರ್ ವಿಭಾಗದ ಡಿವೈಎಸ್ಪಿ ಜಿ. ಮಹೇಶ್, ಆರ್‌ಪಿಐ ರವಿ ಹಾಗೂ ರಾಮ್‌ನನ್ನು ನೋಡಿಕೊಳ್ಳುತ್ತಿದ್ದ ಎ. ರೂಪೇಶ್ ಮತ್ತಿತರರು ಕಂಬನಿ ಮಿಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.