
ಪ್ರಜಾವಾಣಿ ವಾರ್ತೆ
ಬಿಡದಿ: ಶ್ಯಾನಮಂಗಲ ಗ್ರಾಮದ ವೆಂಕಟೇಶ್ ಎಂಬುವವರ ಜಮೀನಿನಲ್ಲಿ ಹೆಬ್ಬಾವಿನ ಮರಿಯನ್ನು ಸೋಮವಾರ ಹಿಡಿದು ರಕ್ಷಿಸಲಾಗಿದೆ.
ಕೆಲಸದ ನಿಯಮಿತ ವೆಂಕಟೇಶ್ ಜಮೀನಿಗೆ ತೆರಳುತ್ತಿದ್ದಾಗ ದೈತ್ಯ ಗಾತ್ರದ ಹೆಬ್ಬಾವಿನ ಮರಿಯನ್ನು ಕಂಡು ಗಾಬರಿಯಾಗಿದ್ದಾರೆ. ನಂತರ ಅರಣ್ಯ ಇಲಾಖೆಗೆ ಕರೆ ಮಾಡಿ ತಿಳಿಸಿದ್ದಾರೆ. ಉರಗ ರಕ್ಷಕರಾದ ಶಶಿಕುಮಾರ್ ಸ್ಥಳಕ್ಕೆ ಬಂದು, ಸುಮಾರು 10 ಅಡಿ ಉದ್ದ 14 ಕೆಜಿ ತೂಕದ ಹೆಬ್ಬಾವಿನ ಮರಿಯನ್ನು ರಕ್ಷಿಸಿ, ಹಂದಿಗುಂದಿ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.