ADVERTISEMENT

ಹಾರೋಹಳ್ಳಿ: 15 ಅಡಿ ಉದ್ದದ ಹೆಬ್ಬಾವು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 2:17 IST
Last Updated 11 ಜುಲೈ 2025, 2:17 IST
ಹಾರೋಹಳ್ಳಿ ತಾಲ್ಲೂಕಿನ ಕಾಡು ಜಕ್ಕಸಂದ್ರ ಗ್ರಾಮದ ಹತ್ತಿರದ ಮುನಿಮಾರನ ದೊಡ್ಡಿ ಹೊರವಲಯದ ಜಮೀನಿನಲ್ಲಿದ್ದ 15 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಿರುವುದು 
ಹಾರೋಹಳ್ಳಿ ತಾಲ್ಲೂಕಿನ ಕಾಡು ಜಕ್ಕಸಂದ್ರ ಗ್ರಾಮದ ಹತ್ತಿರದ ಮುನಿಮಾರನ ದೊಡ್ಡಿ ಹೊರವಲಯದ ಜಮೀನಿನಲ್ಲಿದ್ದ 15 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಿರುವುದು    

ಹಾರೋಹಳ್ಳಿ: ತಾಲ್ಲೂಕಿನ ಕಾಡು ಜಕ್ಕಸಂದ್ರ ಹತ್ತಿರದ ಮುನಿಮಾರನದೊಡ್ಡಿ ಹೊರವಲಯದಲ್ಲಿ ಗುರುವಾರ ಬೆಳಿಗ್ಗೆ ರೈತ ಹನುಮಂತಯ್ಯ ಅವರ ಜಮೀನಿನಲ್ಲಿ 15 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ.

ರೈತ ಹನುಮಂತಯ್ಯ ಹಸುಗಳಿಗೆ ಸೀಮೆ ಹುಲ್ಲು ಕೊಯ್ಯಲು ಜಮೀನಿಗೆ ಹೋಗಿದ್ದ ಸಮಯದಲ್ಲಿ ಹುಲ್ಲಿನ ನಡುವೆ ಹೆಬ್ಬಾವು ಕಾಣಿಸಿಕೊಂಡಿದೆ. ಈ ಬಗ್ಗೆ ಹಾರೋಹಳ್ಳಿ ಅರಣ್ಯ ವ್ಯಾಪ್ತಿ ಗಸ್ತು ಪಾಲಕ ಶಶಿಕುಮಾರ್ ಅವರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜೊತೆಗೆ ಸ್ನೇಕ್ ವಿಶ್ವನಾಥ್ ಸ್ಥಳಕ್ಕೆ ಆಗಮಿಸಿ ಹೆಬ್ಬಾವನ್ನು ಹಿಡಿದು ಆನೇಕಲ್ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT