
ಮಾಗಡಿ: ಪಟ್ಟಣದ ಎನ್ಇಎಸ್ ಸರ್ಕಲ್‌ನಲ್ಲಿ ಮಹಾತ್ಮ ಗಾಂಧಿ ನೂತನ ಪ್ರತಿಮೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಗುರುವಾರ ಅನಾವರಣಗೊಳಿಸಿದರು.
ಮಹಾತ್ಮ ಗಾಂಧಿ ಅವರ ಹೆಸರಿನಲ್ಲಿದ್ದ ನರೇಗಾ ಯೋಜನೆ ಹೆಸರನ್ನು ಬದಲಾಯಿಸುವ ಮೂಲಕ ಬಿಜೆಪಿಯವರು ಮತ್ತೊಮ್ಮೆ ಬಾಪೂ ಕೊಲೆ ಮಾಡಿದ್ದಾರೆ ಎಂದು ಅವರು ಟೀಕಿಸಿದರು.
ಬಾಪೂ ಹತ್ಯೆಗೆ ಆರು ಬಾರಿ ಪ್ರಯತ್ನಿಸಿದ್ದ ಸಂಘ ಪರಿವಾರದ ಸದಸ್ಯ ನಾಥೂರಾಮ ಗೋಡ್ಸೆ ಏಳನೇ ಬಾರಿಗೆ ಅದರಲ್ಲಿ ಯಶಸ್ವಿಯಾದ. ಈಗ ಬಿಜೆಪಿಯವರು ನರೇಗಾ ಹೆಸರು ಬದಲಾವಣೆ ಮೂಲಕ ಮತ್ತೊಮ್ಮೆ ಗಾಂಧೀಜಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದರು.
ಸೋಮೇಶ್ವರ ದೇವಸ್ಥಾನದ ಮುಂಭಾಗ ಮ್ಯಾರಥಾನ್‌ಗೆ ಶಾಸಕ ಬಾಲಕೃಷ್ಣ ಚಾಲನೆ ನೀಡಿದರು. ನೂರಾರು ಯುವಕರು ಮ್ಯಾರಥಾನ್ ನಲ್ಲಿ ಭಾಗವಹಿದ್ದರು.
ಮಾಗಡಿ ಕೋಟೆ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ರಾಜ್ಯ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಎಚ್.ಎಂ.ರೇವಣ್ಣ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ಅಶೋಕ್, ಬೆಂಗಳೂರು ಗ್ರೇಟರ್ ಪ್ರಾಧಿಕಾರದ ಅಧ್ಯಕ್ಷ ನಟರಾಜು ಭಾಗವಹಿಸಿದ್ದರು.