ADVERTISEMENT

ರಾಮನಗರ ಮ್ಯಾರಥಾನ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2019, 1:32 IST
Last Updated 10 ಮಾರ್ಚ್ 2019, 1:32 IST
   

ರಾಮನಗರ: ತಾಲ್ಲೂಕಿನ ‌ಬಸವನಪುರದಲ್ಲಿ ಭಾನುವಾರ ಮುಂಜಾನೆ ರಾಮನಗರ ಮ್ಯಾರಥಾನ್ ಆರನೇ ಆವೃತ್ತಿಯು ನಡೆಯಿತು.

21 ಕಿ.ಮೀ, 11 ಕಿ.ಮೀ ಹಾಗೂ 7 ಕಿ.ಮೀ ದೂರದ ಐದು ವಿಭಾಗಗಳಲ್ಲಿ ಓಟ ನಡೆಯಿತು. ರಾಜ್ಯದ ಒಂದು ಸಾವಿರಕ್ಕೂ ಹೆಚ್ಚು ಓಟಗಾರರು ಪಾಲ್ಗೊಂಡರು.

ಜಿಲ್ಲಾ ಪಂಚಾಯಿತಿ ಸಿಇಒ ಮುಲ್ಲೈ ಮುಹಿಲನ್ ಹಾಗೂ ಮಾಜಿ ಶಾಸಕ ಕೆ. ರಾಜು ಮ್ಯಾರಥಾನ್ ಗೆ ಚಾಲನೆ ನೀಡಿದರು. ಯಲ್ಲೋ ಅಂಡ್ ರೆಡ್ ಫೌಂಡೇಶನ್ ನೇತೃತ್ವದಲ್ಲಿ ವೃದ್ಧರ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೊತ್ತು ಈ ಓಟ ಆಯೋಜಿಸಲಾಗಿತ್ತು.

ADVERTISEMENT
ಜಿಲ್ಲಾ ಪಂಚಾಯಿತಿ ಸಿಇಒ ಮುಲ್ಲೈ ಮುಹಿಲನ್ ಹಾಗೂ ಮಾಜಿ ಶಾಸಕ ಕೆ. ರಾಜು ಮ್ಯಾರಥಾನ್ ಗೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.