ರಾಮನಗರ: ನಗರದ ಶಾಂತಿಕೇತನ ಪಬ್ಲಿಕ್ ಶಾಲೆಯಲ್ಲಿ ರೋಟರಿ ರಾಮನಗರ ಸಹಯೋಗದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ವಿದ್ಯಾರ್ಥಿಗಳು ಕೃಷ್ಣ ಮತ್ತು ರಾಧಾ ವೇಷದಲ್ಲಿ ಮಿಂಚಿದರು. ರಾಧಾಕೃಷ್ಣ ನೃತ್ಯ ಮತ್ತು ಕೃಷ್ಣನ ಬಾಲ್ಯಲೀಲೆಗಳ ಕುರಿತ ನಾಟಕ ಗಮನ ಸೆಳೆಯಿತು.
ಮಹಾಭಾರತ ಯುದ್ದದ ಸಂದರ್ಭದಲ್ಲಿ ಕೃಷ್ಣ ನೀಡಿದ ಉಪದೇಶ ಭಗವದ್ಗೀತೆಯಾಗಿದ್ದು, ಮನುಕುಲಕ್ಕೆ ದಾರಿ ತೋರುವ ಗ್ರಂಥವಾಗಿದೆ ಎಂದು ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಆರ್. ಕುಮಾರಸ್ವಾಮಿ ಹೇಳಿದರು.
ಮಕ್ಕಳು ಚಿಕ್ಕಂದಿನಿಂದಲೇ ಪರರಂಪರೆ ಅರಿಯುವ ಮೂಲಕ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಮಾನವ ಸಂಪನ್ಮೂಲ ಮತ್ತು ಕಾರ್ಯತಂತ್ರ ಸಲಹೆಗಾರ್ತಿ ಅಶ್ವಿನಿ ಮಾಸ್ತಿ ಸಲಹೆ ನೀಡಿದರು.
ರಾಮನಗರ ರೋಟರಿ ಸಂಸ್ಥೆ ಅಧ್ಯಕ್ಷೆ ಸೌಮ್ಯ ಕುಮಾರ್, ಸದಸ್ಯರು, ಪ್ರಾಂಶುಪಾಲರು, ಸಿಬ್ಬಂದಿ ಹಾಗೂ ಪೋಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.