ADVERTISEMENT

ಕನಕಪುರ | ಏ.13, 14ಕ್ಕೆ ಮನೆ ಮನೆ ಮತದಾನ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 7:38 IST
Last Updated 11 ಏಪ್ರಿಲ್ 2024, 7:38 IST
ಕನಕಪುರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಆರ್‌ಒ ರಾಘವೇಂದ್ರ ಮಾತನಾಡಿದರು
ಕನಕಪುರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಆರ್‌ಒ ರಾಘವೇಂದ್ರ ಮಾತನಾಡಿದರು   

ಕನಕಪುರ: ಚುನಾವಣೆಯಲ್ಲಿ ಅಂಗವಿಕಲರು ಮತ್ತು 85 ವರ್ಷ ದಾಟಿದ ನಾಗರಿಕರಿಗೆ ಮನೆಯಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದು ತಾಲ್ಲೂಕಿನ 352 ಮಂದಿ ನೊಂದಣಿ ಮಾಡಿಸಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ರಾಘವೇಂದ್ರ ತಿಳಿಸಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಂಗವಿಕಲರು ಮತ್ತು ಹಿರಿಯ ನಾಗರಿಕರ ಮತವನ್ನು ಏಪ್ರಿಲ್‌ 13 ಮತ್ತು 14 ರಂದು ಚುನಾವಣಾ ತಂಡವು ಮನೆಗೆ ಭೇಟಿ ನೀಡಿ ಪಡೆಯಲಿದೆ. ತಾಲ್ಲೂಕಿನಲ್ಲಿ ಒಟ್ಟು 10 ತಂಡಗಳನ್ನು ಮಾಡಿದ್ದು ಬೆಳಿಗ್ಗೆ 7.30ಕ್ಕೆ ಮನೆಗೆ ಭೇಟಿ ನೀಡಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ADVERTISEMENT

ಮನೆಗೆ ಭೇಟಿ ನೀಡಿ ಮತದಾನ ಮಾಡಿಸುವ ತಂಡಕ್ಕೆ ತರಬೇತಿ ನೀಡಲಾಗಿದೆ. ಮನೆ ಮತದಾನವನ್ನು ವಿಡಿಯೋ ಮಾಡಲಾಗುವುದು. ಮತದಾನಕ್ಕೆ ಮನೆಗಳಿಗೆ ಬರುವ ತಂಡಕ್ಕೆ ಸಂಪೂರ್ಣ ಸಹಕಾರ ನೀಡಿ ಎಂದು ಮನವಿ ಮಾಡಿದರು.

ತಹಶೀಲ್ದಾರ್‌ ಡಾ.ಸ್ಮಿತಾರಾಮ್‌ ಉಪಸ್ಥಿತರಿದ್ದರು.

ತಾಲ್ಲೂಕಿನಲ್ಲಿ ಒಟ್ಟು 2,31,262 ಮತದಾರರಿದ್ದಾರೆ. ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,72,896ರಿದ್ದು ಶೇ 85 ರಷ್ಟು ಮತದಾನದ ಹಕ್ಕು ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಮತಗಟ್ಟೆ: ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 297 ಮತಗಟ್ಟೆ ಕೇಂದ್ರಗಳನ್ನು ಮಾಡಿದ್ದು ಅದರಲ್ಲಿ 61 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳಾದರೆ ಕೋಡಿಹಳ್ಳಿ ಹೋಬಳಿಯ ಹಲಸೂರು ಮತ್ತು ಕಸಬಾ ಹೋಬಳಿಯ ನಾರಾಯಣಪುರ ಅತಿಸೂಕ್ಷ್ಮ ಮತಗಟ್ಟೆಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.