ರಾಮನಗರ: ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿ ಹೆಚ್ಚುತ್ತಿರುವ ವಾಹನಗಳು ಮತ್ತು ಸಂಚಾರ ದಟ್ಟಣೆಯಿಂದಾಗಿ ವಾಹನಗಳ ನಿಲುಗಡೆ ಸಮಸ್ಯೆಯೂ ಬಿಗಡಾಯಿಸುತ್ತಿದೆ. ವಾಹನ ಪಾರ್ಕಿಂಗ್ ವಿಷಯಕ್ಕೆ ಸವಾರರು ಹಾಗೂ ಚಾಲಕರ ನಡುವೆ ನಡೆಯುವ ಗಲಾಟೆ ತಪ್ಪಿಸುವುದಕ್ಕಾಗಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮುಂದಾಗಿದ್ದಾರೆ.
ನಗರದ ವಿವಿಧೆಡೆ ವಾಹನ ನಿಲುಗಡೆಗಾಗಿಯೇ ಸ್ಥಳಗಳನ್ನು ಗುರುತಿಸಿರುವ ಅವರು, ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 115 ಹಾಗೂ 1989ರ ನಿಯಮ 221ಎ(5) ರಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ದಿನವಾರು ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದ್ದಾರೆ. ಸುಗಮ ಸಂಚಾರಕ್ಕಾಗಿ ಕೆಲವೆಡೆ ನಿಲುಗಡೆ ನಿಷೇಧಿಸಿದ್ದಾರೆ.
ಎಲ್ಲೆಲ್ಲಿ ನಿಲುಗಡೆ?: ಪಿಡಬ್ಲ್ಯೂಡಿ ಸರ್ಕಲ್‌ನಿಂದ ವಾಟರ್ ಟ್ಯಾಂಕ್ ಸರ್ಕಲ್‌ವರೆಗೂ ಜಿಲ್ಲಾ ಕ್ರೀಡಾಂಗಣ ಕಡೆಗೆ ಮತ್ತು ವಾಟರ್ ಟ್ಯಾಂಕ್ ಸರ್ಕಲ್‌ನಿಂದ ಕೆಪಿಟಿಸಿಎಲ್ (ಬೆಸ್ಕಾಂ) ಕಚೇರಿವರೆಗೆ. ನಗರಸಭೆ ಕಡೆಗೆ ದ್ವಿಚಕ್ರ ವಾಹನ ನಿಲುಗಡೆ ಮತ್ತು ಪರಿವೀಕ್ಷಣೆ ಮಂದಿರದ ಕಡೆಗೆ ನಾಲ್ಕು ಚಕ್ರ ವಾಹನ ಹಾಗೂ ಕೆಪಿಟಿಸಿಎಲ್ (ಬೆಸ್ಕಾಂ) ಕಚೇರಿಯಿಂದ ರೈಲು ನಿಲ್ದಾಣದ ಸರ್ಕಲ್‌ವರೆಗೂ ಅಂಚೆ ಕಚೇರಿ ಕಡೆಗೆ ದ್ವಿಚಕ್ರ ವಾಹನಗಳನ್ನು ವಾರದ ಎಲ್ಲಾ ದಿನ ನಿಲುಗಡೆ ಮಾಡಬಹುದಾಗಿದೆ.
ರೈಲು ನಿಲ್ದಾಣದ ಸರ್ಕಲ್‌ನಿಂದ ಅರ್ಕಾವತಿ ಸೇತುವೆವರೆಗೂ (ಹಳೆ ಬಸ್ ನಿಲ್ದಾಣದ ರಸ್ತೆ) ರಸ್ತೆ ಪೂರ್ವ-ಪಶ್ಚಿಮವಾಗಿದ್ದು, ರಸ್ತೆಯ ಉತ್ತರದ ಕಡೆಗೆ ಭಾನುವಾರ, ಮಂಗಳವಾರ, ಗುರುವಾರ ಶನಿವಾರ, ದಕ್ಷಿಣದ ಕಡೆಗೆ ಸೋಮವಾರ, ಬುಧವಾರ, ಶುಕ್ರವಾರ ದ್ವಿ-ಚಕ್ರ ವಾಹನ ನಿಲುಗಡೆಗೆ ಅವಕಾಶ ಮಾಡುವಂತೆ ಮತ್ತು ನಾಲ್ಕು ಚಕ್ರ ವಾಹನ ನಿಲುಗಡೆಗೆ ನಿಷೇಧಿಸಲಾಗಿದೆ.
ಬಜಾರ್ ಸರ್ಕಲ್‌ನಿಂದ ಮಂಡಿಪೇಟೆ ರಸ್ತೆ ಉತ್ತರ-ದಕ್ಷಿಣವಾಗಿದ್ದು ರಸ್ತೆಯ ಪೂರ್ವದ ಕಡೆಗೆ ಭಾನುವಾರ, ಮಂಗಳವಾರ, ಗುರುವಾರ, ಶನಿವಾರ, ಪಶ್ಚಿಮದ ಕಡೆಗೆ ಸೋಮವಾರ, ಬುಧವಾರ, ಶುಕ್ರವಾರ ದ್ವಿ-ಚಕ್ರ ವಾಹನ ನಿಲುಗಡೆಗೆ ಅವಕಾಶ ಮಾಡುವಂತೆ ಮತ್ತು ನಾಲ್ಕು ಚಕ್ರ ವಾಹನ ನಿಲುಗಡೆಗೆ ನಿಷೇಧಿಸಲಾಗಿದೆ.
ಬಜಾರ್ ಸರ್ಕಲ್‌ನಿಂದ ಆಲದ ಮರ ಸರ್ಕಲ್ ಕಾಮನಗುಡಿ ಸರ್ಕಲ್ ಮಾರ್ಗವಾಗಿ ಈ ರಸ್ತೆಯು ಉತ್ತರ-ದಕ್ಷಿಣವಾಗಿದ್ದು ರಸ್ತೆಯ ಪೂರ್ವದ ಕಡೆಗೆ ಭಾನುವಾರ, ಮಂಗಳವಾರ, ಗುರುವಾರ ಶನಿವಾರ, ಪಶ್ಚಿಮದ ಕಡೆಗೆ ಸೋಮವಾರ, ಬುಧವಾರ, ಶುಕ್ರವಾರ ದ್ವಿ-ಚಕ್ರ ವಾಹನ ನಿಲುಗಡೆಗೆ ಅವಕಾಶ ಮಾಡುವಂತೆ ಮತ್ತು ನಾಲ್ಕು ಚಕ್ರ ವಾಹನ ನಿಲುಗಡೆಗೆ ನಿಷೇಧಿಸಲಾಗಿದೆ.
ಬಜಾರ್ ರಸ್ತೆಯಿಂದ ಛತ್ರದ ಬೀದಿ ರಸ್ತೆಯು ಉತ್ತರ-ದಕ್ಷಿಣವಾಗಿದ್ದು, ರಸ್ತೆಯ ಪೂರ್ವದ ಕಡೆಗೆ ಭಾನುವಾರ, ಮಂಗಳವಾರ, ಗುರುವಾರ ಶನಿವಾರ, ಪಶ್ಚಿಮದ ಕಡೆಗೆ ಸೋಮವಾರ, ಬುಧವಾರ, ಶುಕ್ರವಾರ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಮಾಡುವಂತೆ ಮತ್ತು ನಾಲ್ಕು ಚಕ್ರ ವಾಹನ ನಿಲುಗಡೆಗೆ ನಿಷೇಧಿಸಲಾಗಿದೆ.
ಅರ್ಕಾವತೆ ಸೇತುವೆ ಅಂಚಿನಿಂದ ಹಳೇ ಬಸ್ ನಿಲ್ದಾಣದ ಸರ್ಕಲ್‌ನಲ್ಲಿ ಹಳೇ ಬಸ್ ನಿಲ್ದಾಣದ ಬಸವೇಶ್ವರ ದೇವಸ್ಥಾನ ಮುಂದೆ ಹೊರತುಪಡಿಸಿ ರಸ್ತೆ ಬಿಳಿ ಪಟ್ಟಿಯ ಒಳಗೆ ದ್ವಿ-ಚಕ್ರ ವಾಹನ ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ (ವಾರದ ಎಲ್ಲಾ ದಿನ) ನಿಲುಗಡೆ ಮಾಡುವಂತೆ ನಾಲ್ಕೂ ಚಕ್ರ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಹಳೆ ಬಸ್ ನಿಲ್ದಾಣದ ಸಿಟಿ ಬಸ್ ನಿಲ್ದಾಣದಲ್ಲಿ ನಾಲ್ಕು ಚಕ್ರ ವಾಹನ ಮತ್ತು ದ್ವಿ-ಚಕ್ರ ವಾಹನ ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ (ವಾರದ ಎಲ್ಲಾ ದಿನ) ನಿಲುಗಡೆ ಮಾಡಬಹುದು. ನಿಲ್ದಾಣದ ಬಳಿ ಇರುವ ಅರಳಿ ಮರದಿಂದ ಪಿಎಲ್‌ಡಿ ಬ್ಯಾಂಕ್ ಕಡೆಗೆ ಹೋಗುವ ರಸ್ತೆ ಎಡ ಭಾಗದಲ್ಲಿ ದ್ವಿ-ಚಕ್ರ ವಾಹನ ನಿಲುಗಡೆಗೆ (ಆಸ್ಪತ್ರೆಯ ಕಾಂಪೌಂಡ್ ಕಡೆಗೆ) ವಾರದ ಎಲ್ಲಾ ದಿನ ಅವಕಾಶ ವಿದ್ದು, ನಾಲ್ಕು ಚಕ್ರ ವಾಹನ ನಿಲುಗಡೆ ನಿಷೇಧಿಸಿದೆ.
ಹಳೆ ಬಸ್ ನಿಲ್ದಾಣದದಿಂದ ಐಜೂರು ಸರ್ಕಲ್ ಕಡೆಗೆ 1ನೇ ಕ್ರಾಸ್‌ವರೆಗೆ ರಸ್ತೆಯ ಎರಡು ಬದಿಯಲ್ಲಿ ದ್ವಿ-ಚಕ್ರ ವಾಹನಗಳು ವಾರದ ಎಲ್ಲಾ ದಿನ ನಿಲುಗಡೆ ಮಾಡಬಹುದು. ಇಲ್ಲಿ ನಾಲ್ಕೂ ಚಕ್ರ ವಾಹನ ನಿಲುಗಡೆ ನಿಷೇಧವಿದ್ದು, ನಂತರ 1ನೇ ಕ್ರಾಸ್‌ನಿಂದ ಐಜೂರು ಸರ್ಕಲ್ ಸಿಗ್ನಲ್‌ವರೆಗೂ ವಾಹನ ನಿಲುಗಡೆ ಸಂಪೂರ್ಣ ನಿಷೇಧಿಸಲಾಗಿದೆ.
ಬೆನಕ ಬಜಾರ್ ರಸ್ತೆ (ಬಿ.ಎಂ ರಸ್ತೆಯಿಂದ ಐಜೂರು ಕಡೆಗೆ) ರಸ್ತೆ ಎರಡು ಬದಿಯಲ್ಲಿ ವಾರದ ಎಲ್ಲಾ ದಿನ ನಿಲುಗಡೆಗೆ ಅವಕಾಶವಿದ್ದು, ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ನಿಷೇಧವಿದೆ. ಐಜೂರು ಸರ್ಕಲ್‌ನಿಂದ ಲಕ್ಷ್ಮಿ ವೆಂಕಟೇಶ್ವರ ಟ್ರೇಡರ್ಸ್‌ವರೆಗೂ (ಮಾಗಡಿ-ಜಾಲಮಂಗಲ ರಸ್ತೆ) ವಾರದ ಎಲ್ಲಾ ದಿನ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಲಕ್ಷ್ಮಿ ವೆಂಕಟೇಶ್ವರ ಟ್ರೇಡರ್ಸ್‌ನಿಂದ ಕೆಂಪೇಗೌಡ ಸರ್ಕಲ್‌ವರೆಗೂ ವಾರದ ಎಲ್ಲಾ ದಿನ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.