ADVERTISEMENT

ಮುನಿಸಿಪಲ್‌ ರಸ್ತೆಗೆ ಡಾ.ರಾಜಕುಮಾರ್ ಹೆಸರಿಡಲು ನಗರಸಭೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 6:55 IST
Last Updated 17 ಏಪ್ರಿಲ್ 2022, 6:55 IST
ಕನಕ‍ಪುರದಲ್ಲಿ ಸ್ವಕರವೇ ಪದಾಧಿಕಾರಿಗಳು ನಗರಸಭೆ ಮ್ಯಾನೇಜರ್‌ ನಟರಾಜ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಕನಕ‍ಪುರದಲ್ಲಿ ಸ್ವಕರವೇ ಪದಾಧಿಕಾರಿಗಳು ನಗರಸಭೆ ಮ್ಯಾನೇಜರ್‌ ನಟರಾಜ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಕನಕಪುರ: ‘ವರನಟ ಡಾ.ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ ಸಮೀಪಿಸುತ್ತಿದೆ. ಹಾಗಾಗಿ, ಏ. 24ರೊಳಗೆ ಎಕ್ಸ್‌ ಮುನಿಷಿಪಲ್‌ ಹೈಸ್ಕೂಲ್‌ಗೆ ಹೋಗುವ ರಸ್ತೆಗೆ ಡಾ.ರಾಜ್‌ಕುಮಾರ್‌ ಹೆಸರನ್ನು ನಾಮಕರಣ ಮಾಡಬೇಕು’ ಎಂದು ಒತ್ತಾಯಿಸಿ ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಶನಿವಾರ ನಗರಸಭೆಗೆ ಮನವಿ ಪತ್ರ ಸಲ್ಲಿಸಿದರು.

ರಾಜ್‌ಕುಮಾರ್‌ ಕನ್ನಡ ಚಿತ್ರರಂಗಕ್ಕೆ ಪೌರಾಣಿಕ, ಸಾಮಾಜಿಕ, ಕೌಟುಂಬಿಕ, ಸಾಂಸ್ಕೃತಿಕ, ಐತಿಹಾಸಿಕ ಚಿತ್ರಗಳನ್ನು ನೀಡಿದ್ದಾರೆ. ಕನ್ನಡದ ಧ್ರುವತಾರೆಯಾಗಿದ್ದರು. ಅವರು ಹೆಸರನ್ನು ಕನಕಪುರದ ರಸ್ತೆಯೊಂದಕ್ಕೆ ಇಡುವ ಮೂಲಕ ಕನಕಪುರಕ್ಕೂ ಅವರಿಗೂ ಇದ್ದ ಅವಿನಾಭಾವ ಸಂಬಂಧವನ್ನು ಶಾಶ್ವತವಾಗಿಸಬೇಕು ಎಂದುಕೋರಿದರು.

ಸ್ವಕರವೇ ಜಿಲ್ಲಾ ಅಧ್ಯಕ್ಷ ಕೆ.ಎಸ್‌. ಭಾಸ್ಕರ್‌, ತಾಲ್ಲೂಕು ಅಧ್ಯಕ್ಷ ಅಂಗಡಿ ರಮೇಶ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ್‌, ಕಾರ್ಮಿಕ ಘಟಕದ ಅಧ್ಯಕ್ಷ ಅಸ್ಗರ್‌ಖಾನ್‌, ಅನಿಲ್‌ಕುಮಾರ್‌ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.