ಮಾಗಡಿ: ಮಾಗಡಿ- ಹುಲಿಯೂರುದುರ್ಗ ಮುಖ್ಯರಸ್ತೆ ಕೊಂಡಹಳ್ಳಿ ಗೇಟ್ ಸಮೀಪ ಸೋಮವಾರ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಎದುರಿನಿಂದ ಬದುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಹಿಂಬದಿ ಕುಳಿತಿದ್ದ ಮಗ ಸ್ಥಳದಲ್ಲಿ ಮೃತಪಟ್ಟು, ತಂದೆ ಗಾಯಗೊಂಡಿದ್ದಾನೆ.
ಕುಣಿಗಲ್ ತಾಲೂಕಿನ ನಾಗನಹಳ್ಳಿ ಗ್ರಾಮದ ಹರ್ಷ(14) ಸಾವನಪ್ಪಿದ ಬಾಲಕ. ಆತ ಮಾಗಡಿ ತಾಲ್ಲೂಕಿನ ದೋಣಕುಪ್ಪೆಯ ಸಿಎಂಎಸ್ ಮಾಡೆಲ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ.
ಬೈಕ್ ಚಲಾಯಿಸುತ್ತಿದ್ದ ಹರ್ಷ ತಂದೆ, ನಾಗೇಶ್ (51) ಸೊಂಟಕ್ಕೆ ಗಂಭಿರವಾದ ಪೆಟ್ಟು ಬಿದ್ದಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಸಿಮೆಂಟ್, ಕಬ್ಬಿಣ ತುಂಬಿಕೊಂಡು ಮಾಗಡಿ ಕಡೆಯಿಂದ ಹೊರಟಿತ್ತು. ಬೈಕ್ ಕುಣಿಗಲ್ ತಾಲ್ಲೂಕಿನ ನಾಗನಹಳ್ಳಿಯಿಂದ ಸೋಲೂರು ಹೋಬಳಿಯ ಬಂಡೆಮಠದತ್ತ ಹೊರಟಿತ್ತು.
ಡಿಕ್ಕಿ ರಭಸಕ್ಕೆ ಕಾರು ಮತ್ತು ಬೈಕ್ ರಸ್ತೆ ಪಕ್ಕದ ಹೊಲಕ್ಕೆ ಉರುಳಿ ಬಿದ್ದಿವೆ. ಹೆಲ್ಮೆಟ್ ಧರಿಸದ ಕಾರಣ ಹರ್ಷ ತಲೆಗೆ ಬಲವಾದ ಪೆಟ್ಟು ಬಿದ್ದು ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ. ಕಾರು ಚಾಲಕನ ವಿರುದ್ಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.