ADVERTISEMENT

ಕನಕಪುರ: ರೈತರ ಬೆವರಿನ ಫಲವೇ ಸಂಕ್ರಾಂತಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 4:26 IST
Last Updated 22 ಜನವರಿ 2026, 4:26 IST
ಕನಕಪುರ ರಂಗನಾಥ ಬಡಾವಣೆ ಹೊಂಗಿರಣ ಆವರಣದಲ್ಲಿ ಸಂಕ್ರಾಂತಿ ಕವಿಗೋಷ್ಠಿ ನಡೆಯಿತು
ಕನಕಪುರ ರಂಗನಾಥ ಬಡಾವಣೆ ಹೊಂಗಿರಣ ಆವರಣದಲ್ಲಿ ಸಂಕ್ರಾಂತಿ ಕವಿಗೋಷ್ಠಿ ನಡೆಯಿತು   

ಕನಕಪುರ: ಸಂಕ್ರಾಂತಿ ಹೊಸ ವರ್ಷಕ್ಕೂ ಮೊದಲು ಬರುವ ಹಬ್ಬವಾಗಿದೆ. ರೈತರು ವರ್ಷವಿಡೀ ದುಡಿದು ಬೆವರು ಹರಿಸಿದ ಫಲವೇ ಸಂಕ್ರಾಂತಿ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ಇಲ್ಲಿನ ರಂಗನಾಥ ಬಡಾವಣೆ ಹೊಂಗಿರಣ ಆವರಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಕವಿಗೋಷ್ಠಿ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಕಾಲದಲ್ಲಿ ಸೂರ್ಯ ತನ್ನ ದಿಕ್ಕು ಬದಲಿಸುತ್ತಾನೆ. ವಸಂತ ಕಾಲ ಆರಂಭವಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರತಿ ವರ್ಷವೂ ವೇದಿಕೆಯಿಂದ ಸಂಕ್ರಾಂತಿ ಕವಿಗೋಷ್ಠಿ ಏರ್ಪಡಿಸಿ ಜಿಲ್ಲೆಯಲ್ಲಿರುವ ಸಾಹಿತಿಗಳನ್ನು ಕರೆಸಿ, ವೈವಿಧ್ಯತೆಯಿಂದ ಕೂಡಿದ ಕವಿತೆಗಳನ್ನು ವಾಚಿಸುವುದು ಒಂದು ಒಳ್ಳೆಯ ಕಾರ್ಯಕ್ರಮ ಎಂದು ಅಭಿಪ್ರಾಯಪಟ್ಟರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಲ್ಲತಳ್ಳಿ ಎಚ್.ತುಕರಾಮ್ ಮಾತನಾಡಿ, ಜಿಲ್ಲಾ ಲೇಖಕರ ವೇದಿಕೆಯು ಜಿಲ್ಲೆಯಲ್ಲಿ ಸಾಹಿತ್ಯ ಬೆಳವಣಿಗೆಗೆ ಶ್ರಮವಹಿಸುತ್ತಿದೆ. ಹೊಸ ತಲೆಮಾರಿನ ಕವಿಗಳನ್ನು ಪ್ರೋತ್ಸಾಹಿಸಿ ಹೊಸ ಸಾಹಿತ್ಯ, ಉದಯಕ್ಕೆ ಕಾರಣವಾಗಲಿದೆ ಎಂದು ತಿಳಿಸಿದರು.

ಕಾಕೋಳು ಶೈಲೇಶ್ ಸಾಹಿತಿ ಕೂ.ಗಿ ಗಿರಿಯಪ್ಪ ಅವರ ಭಾವ ಝೇಂಕಾರ ಕೃತಿ ಕುರಿತು ಮಾತನಾಡಿದರು.

ತೋಟದ ಮನೆ ಗಿರೀಶ್, ಚನ್ನಮಾನಹಳ್ಳಿ ಮಲ್ಲೇಶ್, ಬೊಮ್ಮನಾಯಕನಹಳ್ಳಿ ಕೃಷ್ಣಪ್ಪ, ನಾಗೇಂದ್ರ, ವೆಂಕಟ ಗಿರಿಯಪ್ಪ, ವೇಣುಗೋಪಾಲ, ಎಚ್.ಎನ್.ಮಾದೇಶ್ ಕವನ ವಾಚಿಸಿದರು. ವಿನಯ್ ಕುಮಾರ್, ಪೂರ್ಣಚಂದ್ರ, ಸಿದ್ದರಾಜಯ್ಯ, ಹೊಸದೊಡ್ಡಿ ರಮೇಶ್ ಗೀತ ಗಾಯನ ನಡೆಸಿಕೊಟ್ಟರು.

ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು, ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ, ಆಕಾಶವಾಣಿ ಕಲಾವಿದ ಚಿಕ್ಕಮರಿಗೌಡ, ವೇದಿಕೆ ಅಂಗಡಿ ರಮೇಶ್, ಗಬ್ಬಾಡಿ ಕಾಡಗೌಡ, ಚಿಕ್ಕರಂಗಯ್ಯ, ನಾಗರಾಜು, ನಮನ ಚಂದ್ರು, ನಲ್ಲಹಳ್ಳಿ ಶಿವಲಿಂಗ, ಸಿ.ಪುಟ್ಟಸ್ವಾಮಿ, ಚೆನ್ನೇಗೌಡ, ಡಿ.ಎಚ್.ಪುಟ್ಟಸ್ವಾಮಿ, ಚಂದ್ರೇಗೌಡ, ಓಂಕಾರೇಶ್ವರ, ಸ್ವಾತಿ, ವೀರಭದ್ರೇಗೌಡ ಇದ್ದರು.

ಕನಕಪುರ ರಂಗನಾಥ ಬಡಾವಣೆಯ ಹೊಂಗಿರಣ ಆವರಣದಲ್ಲಿ ನಡೆದ ಸಂಕ್ರಾಂತಿ ಕವಿಗೋಷ್ಠಿಯಲ್ಲಿ ಭಾವ ಝೇಂಕಾರ ಕೃತಿ ಬಿಡುಗಡೆ ಮಾಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.