ADVERTISEMENT

ಜಮೀನು ವಿವಾದ | ಮಾರಕಾಸ್ತ್ರಗಳಿಂದ ಕೊಚ್ಚಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷನ ಕೊಲೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 5:32 IST
Last Updated 27 ಜುಲೈ 2025, 5:32 IST
<div class="paragraphs"><p>ನಂಜೇಶ್</p></div>

ನಂಜೇಶ್

   

ಕನಕಪುರ (ರಾಮನಗರ): ಜಮೀನು ವಿವಾದದ ಹಿನ್ನೆಲೆಯಲ್ಲಿ ತಾಲ್ಲೂಕಿನ ಸಾತನೂರು ಹೋಬಳಿಯ ಅಚ್ಚಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೊಬ್ಬರನ್ನು ಶನಿವಾರ ರಾತ್ರಿ ಮಾರಕಾಸ್ತ್ರಗಳಿದ ಹೊಡೆದು ಕೊಲೆ ಮಾಡಲಾಗಿದೆ.

ಹೊಂಗಾಣಿದೊಡ್ಡಿ ಗ್ರಾಮದ ನಂಜೇಶ್ (45) ಕೊಲೆಯಾದವರು. ಸಾತನೂರಿನ ಡಾಬಾದಲ್ಲಿ ನಂಜೇಶ್ ಅವರು ರಾತ್ರಿ ಸ್ನೇಹಿತರೊಂದಿಗೆ ಮದ್ಯದ ಪಾರ್ಟಿಯಲ್ಲಿದ್ದರು.

ADVERTISEMENT

ಈ ವೇಳೆ ಮಾರಕಾಸ್ತ್ರಗಳೊಂದಿಗೆ ಏಕಾಏಕಿ ನುಗ್ಗಿದ ನಾಲ್ಕೈದು ಮಂದಿ ಮನಬಂದಂತೆ ನಂಜೇಶ್ ಅವರನ್ನು ಹೊಡೆದು ಪರಾರಿಯಾದರು. ಹಲ್ಲೆಯ ತೀವ್ರತೆಗೆ ನಂಜೇಶ್ ಸ್ಥಳದಲ್ಲೇ ಕೊನೆಯುಸಿರೆಳೆದರು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು‌ ಹಂತಕರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು‌ ಸಾತನೂರು ಠಾಣೆ ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.