ADVERTISEMENT

ಸೋಬಾನೆ ಪದ ಗಾಯನ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 2:24 IST
Last Updated 25 ಜನವರಿ 2021, 2:24 IST
ರಾಮನಗರದ ಜಾನಪದ ಲೋಕದಲ್ಲಿ ಮುದಗೆರೆ ಲಿಂಗಮ್ಮ ತಂಡದವರು ಸೋಬಾನೆ ಗಾಯನ ನಡೆಸಿಕೊಟ್ಟರು
ರಾಮನಗರದ ಜಾನಪದ ಲೋಕದಲ್ಲಿ ಮುದಗೆರೆ ಲಿಂಗಮ್ಮ ತಂಡದವರು ಸೋಬಾನೆ ಗಾಯನ ನಡೆಸಿಕೊಟ್ಟರು   

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಮುದುಗೆರೆ ಗ್ರಾಮದ ಲಿಂಗಮ್ಮ ಮತ್ತು ತಂಡದವರು ಇಲ್ಲಿನ ಜಾನಪದ ಲೋಕದಲ್ಲಿ ಸೋಬಾನೆ ಹಾಗೂ ದೇವರ ಪದಗಳ ಗಾಯನ ನಡೆಸಿಕೊಟ್ಟರು.

ನಲವತ್ತು ವರ್ಷಗಳಿಂದ ಸೋಬಾನೆ ಪದಗಳನ್ನು ಹಾಡುತ್ತಿದ್ದೇವೆ. ಸೋಬಾನೆ, ದೇವರ ಪದಗಳ ಗಾಯನಕ್ಕೆ ಈಗಲೂ ಬೇಡಿಕೆ ಇದೆ ಎಂದು ಹಿರಿಯ ಗಾಯಕಿ ಲಿಂಗಮ್ಮ ತಿಳಿಸಿದರು.

ನಮಗೆ ವಯಸ್ಸಾಗಿದೆ. ಸರ್ಕಾರಿ ಇಲಾಖೆಗಳನ್ನು ಹುಡುಕಿಕೊಂಡು ಹೋಗುವಷ್ಟು ಶಕ್ತಿ ಇಲ್ಲ. ಆದ್ದರಿಂದ ಇಲಾಖೆಯ ಅಧಿಕಾರಿಗಳು ನಮ್ಮ ಬಳಿಗೆ ಬಂದರೆ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ADVERTISEMENT

ಗಾಯಕಿಯರಾದ ಪುಟ್ಟಮ್ಮ, ಜಯಮ್ಮ, ನಿಂಗಮ್ಮ ಸೋಬಾನೆ, ದೇವರ ಪದಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.