ADVERTISEMENT

ಗೀತ ಗಾಯನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 5:35 IST
Last Updated 22 ಫೆಬ್ರುವರಿ 2021, 5:35 IST
ಕನಕಪುರ ಲಯನ್ಸ್‌ ಶಾಲೆಯಲ್ಲಿ ನಡೆದ ಕವಿಗೋಷ್ಠಿ ಮತ್ತು ಗಾಯನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ದುಡಿದವರನ್ನು ಸನ್ಮಾನಿಸಲಾಯಿತು
ಕನಕಪುರ ಲಯನ್ಸ್‌ ಶಾಲೆಯಲ್ಲಿ ನಡೆದ ಕವಿಗೋಷ್ಠಿ ಮತ್ತು ಗಾಯನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ದುಡಿದವರನ್ನು ಸನ್ಮಾನಿಸಲಾಯಿತು   

ಕನಕಪುರ: ಕವಿಗೋಷ್ಠಿ ಮತ್ತು ಗೀತ ಗಾಯನದಂತಹ ಕಾರ್ಯಕ್ರಮ ನಡೆಸುವುದರಿಂದ ಕವಿ, ಸಾಹಿತಿಗಳು, ಗಾಯಕರ ಉದಯಕ್ಕೆ ಸಹಕಾರಿಯಾಗುತ್ತದೆ ಎಂದು ಕನಕ ಆಸ್ಪತ್ರೆಯ ವೈದ್ಯ ಡಾ.ಟಿ.ಎನ್‌. ವಿಜಯಕು‍ಮಾರ್‌ ತಿಳಿಸಿದರು.

ಇಲ್ಲಿನ ಲಯನ್ಸ್‌ ಶಾಲೆಯಲ್ಲಿ ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ, ಯುವ ಕವಿಗೋಷ್ಠಿ, ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಹುತೇಕ ಮಕ್ಕಳಲ್ಲಿ ಅನನ್ಯ ಪ್ರತಿಭೆಯಿದ್ದರೂ ಸೂಕ್ತ ವೇದಿಕೆ ದೊರೆಯದೆ ಪ್ರತಿಭೆ ಅವರಲ್ಲಿಯೇ ಉಳಿದು ಹೋಗುತ್ತದೆ. ಅಂತಹ ಮಕ್ಕಳನ್ನು ಗುರುತಿಸಿ ವೇದಿಕೆ ಕಲ್ಪಿಸಿಕೊಟ್ಟಾಗ ಅವರಲ್ಲಿರುವ ಪ್ರತಿಭೆ ಹೊರಹೊಮ್ಮಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ADVERTISEMENT

ಯುವ ಕವಿಗಳಾದ ಐಶ್ವರ್ಯ, ಸೃಷ್ಟಿ, ಮಾನಸಾ, ಹಾಜೀರಾ, ಸಾನಿಯಾ ಖಾನಂ, ಶೋಭಾ, ಸಾದಿಯಾ, ಉಷ್ಮಾಬಾನು, ಉಮರ್‌ಖಾಯಂ, ಸಾಯಿದಾ ಮರಿಯಂ, ಸಯ್ಯದ್‌, ಸುಫಿಯಾನ್‌, ಚೇತನ್‌ಕುಮಾರ್‌ ಕವಿತೆ ವಾಚಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅಮೀರ್‌ಖಾನ್‌, ಕೆ.ಸಿ. ಕಾಂತಪ್ಪ ಏಡಮಡು, ಗಬ್ಬಾಡಿ ಜಿ.ಪಿ. ಕಾಡೇಗೌಡ, ಕೆ.ಎಸ್‌. ಭಾಸ್ಕರ್‌, ಕೂ.ಗಿ. ಗಿರಿಯಪ್ಪ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್‌ನ ಅಧ್ಯಕ್ಷ ಅಸ್ಗರ್‌ಖಾನ್‌, ವಿವಿಧ ಸಂಘಟನೆಯ ಎಲ್ಲೇಗೌಡ ಬೆಸಗರಹಳ್ಳಿ, ಸಿ. ರಾಜೇಶ್‌, ಟಿ.ಎಂ. ರಾಮಯ್ಯ, ಚೀಲೂರು ಮುನಿರಾಜು, ಕವಿ ವೆಂಕಟಗಿರಿಯಪ್ಪ, ಪ್ರದೀಪ್‌, ಶಿಕ್ಷಕರಾದ ಸಂತುರಾಮ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.