ADVERTISEMENT

ಟೇಕ್ವಾಂಡೊ: ಶಾನ್ವಿಗೆ ಕಂಚಿನ ಪದಕ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 9:12 IST
Last Updated 3 ಜನವರಿ 2026, 9:12 IST
ಶಾನ್ವಿ ಸತೀಶ್
ಶಾನ್ವಿ ಸತೀಶ್   

ರಾಮನಗರ: ಗುಜರಾತ್‌ನ ಗಾಂಧಿನಗರದ ಧ್ಯಾನ್‌ ಅಕಾಡೆಮಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಟೇಕ್ವಾಂಡೊ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ರಾಮನಗರದ ಟೇಕ್ವಾಂಡೊ ಕ್ರೀಡಾಪಟು ಶಾನ್ವಿ ಸತೀಶ್ ಸ್ಪಾರಿಂಗ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾಳೆ.

ಸ್ಪರ್ಧೆಯ 8–10 ವರ್ಷದೊಳಗಿನವರ 25 ಕೆ.ಜಿ.ಯಿಂದ 30 ಕೆ.ಜಿ ಒಳಗಿನ ತಂಡವನ್ನು ಶಾನ್ವಿ ಪ್ರತಿನಿಧಿಸಿದ್ದಳು. ಸ್ಪರ್ಧೆಯಲ್ಲಿ ಕರ್ನಾಟಕ ಸೇರಿದಂತೆ ತಮಿಳುನಾಡು, ತೆಲಂಗಾಣ, ದೆಹಲಿ, ಗುಜರಾತ್, ಒಡಿಶಾ ಹಾಗೂ ಕೇರಳ ರಾಜ್ಯದ 450ಕ್ಕೂ ಹೆಚ್ಚು ಕ್ರಿಡಾಪಟುಗಳು ಭಾಗವಹಿಸಿದ್ದರು.

ಬೆಂಗಳೂರು ದಕ್ಷಿಣ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಸತೀಶ್ ಹಾಗೂ ಚೈತ್ರಾ ದಂಪತಿ ಪುತ್ರಿಯಾದ 8 ವರ್ಷದ ಶಾನ್ವಿ, ನಗರದ ಹೊರವಲಯದಲ್ಲಿರುವ ನೇಟಸ್ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದಾಳೆ.

ADVERTISEMENT

ಈಗಾಗಲೇ ದುಬೈ‌, ಉಜ್ಬೇಕಿಸ್ತಾನ ಹಾಗೂ ಮಲೇಷ್ಯಾದಲ್ಲಿ ನಡೆದಿದ್ದ ಟೇಕ್ವಾಂಡೊ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದಿದ್ದಾಳೆ. ಶಾನ್ವಿಗೆ ಭಾರತ ತಂಡದ ತರಬೇತುದಾರ ಪ್ರದೀಪ್ ಮತ್ತು ಬಾಲರಾಜನ್ ತರಬೇತಿ ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.