ರಾಮನಗರ: ಬೆಂಗಳೂರಿನ ಕೋರಮಂಗಲದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಆ. 9 ಮತ್ತು 10ರಂದು ನಡೆದ ಅಸ್ಮಿತ್ ಖೇಲೋ ಇಂಡಿಯಾ ಟೇಕ್ವಾಂಡೊ ಚಾಂಪಿಯನ್‌ಶಿಪ್‌ನಲ್ಲಿ ನಮ್ಮ ರಾಮನಗರದ ಟೇಕ್ವಾಂಡೊ ಸಂಸ್ಥೆಯ ಮೂವರು ಚಿನ್ನದ ಪದಕ ಗಳಿಸಿದ್ದಾರೆ.
25 ಕೆ.ಜಿ ವಿಭಾಗದಲ್ಲಿ ಹರ್ಷಿತ ಪಿ., 42 ಕೆ.ಜಿ ವಿಭಾಗದಲ್ಲಿ ವಂಶಿ ವಿ. ಹಾಗೂ 52 ಕೆ.ಜಿ ವಿಭಾಗದಲ್ಲಿ ಪೂರ್ವಿಕ ಎಂ. ಚಿನ್ನದ ಪದಕ ಗಳಿಸಿದವರು. ಮೂವರೂ ಸಂಸ್ಥೆಯಲ್ಲಿ 5 ವರ್ಷದಿಂದ ತರಬೇತಿ ಪಡೆಯುತ್ತಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಹಾಗೂ ಕಾರ್ಯದರ್ಶಿ ಗೋವಿಂದ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.